‘ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮಠಕ್ಕೆ ಸೇರಿದ್ದು’

https://static.asianetnews.com/images/authors/daab8673-7845-5682-b0e2-baaeb48a261b.jpg
First Published 31, Aug 2018, 5:38 PM IST
Kukke Subramanya Temple Belongs To Mutt Says Pramod Muthalik
Highlights

  • ಪುರಾತನ ದಾಖಲೆಗಳನ್ನು ಮುಂದಿಟ್ಟ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್
  • ಕೆಲವರಿಂದ ದೇವಸ್ಥಾನ ಮತ್ತು ಮಠದ ಮಧ್ಯೆ ಒಡಕು ಸೃಷ್ಟಿಸುವ ಪ್ರಯತ್ನ: ಆರೋಪ

ಮಂಗಳೂರು: ದಕ್ಷಿಣ ಕನ್ನಡದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಮಠದ ಸುಪರ್ದಿಗೆ ಒಪ್ಪಿಸಬೇಕೆಂಬ ಆಗ್ರಹ ಕೇಳಿ ಬಂದಿದೆ. 

ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ಪುರಾತನ ದಾಖಲೆಗಳ ಪ್ರಕಾರ ಸುಬ್ರಹ್ಮಣ್ಯ ಮಠಕ್ಕೆ ಸೇರಬೇಕು. ಆದ್ದರಿಂದ ಈ ದೇವಸ್ಥಾನವನ್ನು ಮಠದ ವಶಕ್ಕೆ ಒಪ್ಪಿಸಬೇಕು, ಎಂದು ಒತ್ತಾಯಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಹೊಸ ವಿವಾದ!

ಈ ನಿಟ್ಟಿನಲ್ಲಿ ಸುಬ್ರಹ್ಮಣ್ಯ ಸ್ವಾಮೀಜಿ ಅವರೊಂದಿಗೆ ಸೆಪ್ಟೆಂಬರ ಮೊದಲ ವಾರದಲ್ಲಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಹಾಗೂ ಸಚಿವರನ್ನು ಭೇಟಿ ಮಾಡಿ ದಾಖಲೆಯನ್ನು ಸಲ್ಲಿಸಲಾಗುವುದು ಎಂದು ಮುತಾಲಿಕ್ ಹೇಳಿದ್ದಾರೆ.

ಈ ಬಗ್ಗೆ ದಾಖಲೆಗಳನ್ನು ಮುಂದಿರಿಸಿದ ಅವರು, ದೇವಸ್ಥಾನ ಮತ್ತು ಮಠದ ಮಧ್ಯೆ ಒಡಕು ಸೃಷ್ಟಿಸುವ ಪ್ರಯತ್ನವನ್ನು ಕೆಲವರು ನಡೆಸುತ್ತಿದ್ದಾರೆ. ದೇವಸ್ಥಾನ-ಮಠ ನಡುವೆ ಅವಿನಾಭಾವ ಸಂಬಂಧ ಇದೆ. ಸ್ಥಗಿತಗೊಂಡಿರುವ ಉತ್ಸವಗಳು ಮತ್ತೆ ಮುಂದುವರಿಯಬೇಕು ಎಂದಿದ್ದಾರೆ.

loader