ಸಹಾಯಕ ಸಂಚಾರ ನಿರೀಕ್ಷಕ, ಸಹಾಯಕ ಲೆಕ್ಕಿಗ, ಸಹಾಯಕ ಉಗ್ರಾಣ ಪಾಲಕ, ಅಂಕಿಅಂಶ ಸಹಾಯಕ, ಕುಶಲಕರ್ಮಿ ಮತ್ತು ತಾಂತ್ರಿಕ ಸಹಾಯಕ ಹುದ್ದೆಗಳ ಕ್ಯಾಟ್ ಪರೀಕ್ಷೆಯ ದಿನಾಂಕವನ್ನು ಪ್ರತ್ಯೇಕವಾಗಿ ವೆಬ್‌ಸೈಟ್‌ನಲ್ಲಿ ತಿಳಿಸಲಾಗುವುದು.
ಬೆಂಗಳೂರು: ಕೆಎಸ್ಆರ್ಟಿಸಿ ‘ಸಿ’ ದರ್ಜೆ ಹಾಗೂ ಮೇಲ್ವಿಚಾರಕ ಹುದ್ದೆಗಳಿಗೆ ಇದೇ ಮೊದಲ ಬಾರಿಗೆ ಆನ್ಲೈನ್ ‘ಸಿಎಟಿ’ ಪರೀಕ್ಷೆ ನಡೆಸಲು ನಿರ್ಧರಿಸಿದೆ. ನ.20ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ಗಂಟೆವರೆಗೆ ಪರೀಕ್ಷೆ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳ 18 ಸ್ಥಳಗಳಲ್ಲಿ 48 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರಗಳ ವಿವರ, ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ನಿಗದಿಯಾಗಿರುವ ಟಿಎಟಿ ಸಂಖ್ಯೆಗಳ ವಿವರಗಳನ್ನು ನಿಗಮದ ವೆಬ್ಸೈಟ್ನಲ್ಲಿ ಪಡೆಯಬಹುದು. ಅಲ್ಲದೇ ಅಭ್ಯರ್ಥಿಗಳ ಪರೀಕ್ಷಾ ಸ್ಥಳ ಗುರುತಿಸಲು ಅನುಕೂಲವಾಗುವಂತೆ ನಿಗಮದ ವೆಬ್ಸೈಟ್ನಲ್ಲಿ ಗೂಗಲ್ ಮ್ಯಾಪ್ ಕೂಡ ಅಳವಡಿಸಲಾಗಿದೆ.
ಪರೀಕ್ಷೆ ವೇಳೆ ಅಭ್ಯರ್ಥಿಗಳು ಕರಪತ್ರವನ್ನು ತಪ್ಪದೆ ತರಬೇಕು. ಸೂಕ್ತ ಗುರುತಿನ ಚೀಟಿ ಇಲ್ಲದ ಅಭ್ಯರ್ಥಿಗಳನ್ನು ಪರೀಕ್ಷೆ ಬರೆಯಲು ಅವಕಾಶ ಇರುವುದಿಲ್ಲ. ಒಂದು ಗಂಟೆ ಮೊದಲು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪರೀಕ್ಷಾ ಕೊಠಡಿಯಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ನಿಷೇಸಲಾಗಿದೆ ಎಂದು ಕೆಎಸ್ಆರ್ಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಹಾಯಕ ಸಂಚಾರ ನಿರೀಕ್ಷಕ, ಸಹಾಯಕ ಲೆಕ್ಕಿಗ, ಸಹಾಯಕ ಉಗ್ರಾಣ ಪಾಲಕ, ಅಂಕಿಅಂಶ ಸಹಾಯಕ, ಕುಶಲಕರ್ಮಿ ಮತ್ತು ತಾಂತ್ರಿಕ ಸಹಾಯಕ ಹುದ್ದೆಗಳ ಕ್ಯಾಟ್ ಪರೀಕ್ಷೆಯ ದಿನಾಂಕವನ್ನು ಪ್ರತ್ಯೇಕವಾಗಿ ವೆಬ್ಸೈಟ್ನಲ್ಲಿ ತಿಳಿಸಲಾಗುವುದು. ಹೆಚ್ಚಿನ ಮಾತಿಗಾಗಿ ಸಂಸ್ಥೆಯ ವೆಬ್ಸೈಟ್ www.ksrtcjobs.com ಹಾಗೂ 7760990051 / 7760990160) ನಲ್ಲಿ ಪಡೆಯಬಹುದು ಎಂದು ಪ್ರಕಟಣೆ ತಿಳಿಸಿದೆ.
(ಕನ್ನಡಪ್ರಭ ವಾರ್ತೆ)
