ಬೆಂಗಳೂರು [ಜು.09] :  ರಾಜ್ಯದ ರಸ್ತೆ ಸಾರಿಗೆ ನಾಲ್ಕೂ ನಿಗಮಗಳನ್ನು ಸರ್ಕಾರದಲ್ಲಿ ವಿಲೀನಗೊಳಿಸುವುದು, ಸಾರಿಗೆ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜು. 16ರಂದು ಪುರಭವನದಿಂದ ಸ್ವಾತಂತ್ರ್ಯ  ಉದ್ಯಾನದವರೆಗೆ ಬೃಹತ್ ಜಾಥಾ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು, ಸರ್ಕಾರ ತನ್ನ ಅಧೀನದ ಲ್ಲಿರುವ ಎಲ್ಲಾ ಇಲಾಖೆ, ನಿಗಮ ಹಾಗೂ ನೌಕರರಿಗೆ ಕಾಲಕಾಲಕ್ಕೆ ನೀಡಬೇಕಾದ ಸೌಲ ಭ್ಯಗಳನ್ನು ನೀಡುತ್ತಿದೆ. 

ಆದರೆ, ಸಾರಿಗೆ ನಿಗ ಮದ ನೌಕರರಿಗೆ ಮಾತ್ರ ಮಲತಾಯಿ ಧೋ ರಣೆ ಅನುಸರಿಸುತ್ತಿದೆ ಎಂದು ದೂರಿದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಾಲ್ಕು ನಿಗಮಗಳಲ್ಲಿ 1.25 ಲಕ್ಷಕ್ಕೂ ಹೆಚ್ಚು ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವೇತನ ಇತರೆ ಸರ್ಕಾರಿ ನೌಕರರ ವೇತನಕ್ಕಿಂತ ಶೇ.35 ರಷ್ಟು ಕಡಿಮೆ ಇದೆ. ವರ್ಗಾವಣೆ ಸೌಲಭ್ಯ, ಆರೋಗ್ಯ ಸಂಜೀವಿನಿ ಭಾಗ್ಯ ಯೋಜನೆ ನೀಡಿಲ್ಲ ಎಂದರು.

ಸಾರಿಗೆ ನೌಕರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆ ಯಲು ಜು. 12 ರಂದು ನೌಕರರು ತೋಳಿಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ. ಜು. 15  ರಂದು ಮೈಸೂರು ಬ್ಯಾಂಕ್ ವೃತ್ತ  ದಿಂದ ರೈಲ್ವೆ ನಿಲ್ದಾಣದವರೆಗೆ ರಸ್ತೆ ಬಂದ್ ಮಾಡಲಾಗು ವುದು. ಜು. 16 ರ ಮಧ್ಯಾಹ್ನ 2 ಕ್ಕೆ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದ  ವರೆಗೆ ಜಾಥಾ ನಡೆಯಲಿದೆ. ನಂತರದ ದಿನಗಳಲ್ಲಿ ಹಂತ ಹಂತವಾಗಿ ರಕ್ತದಾನ ಚಳವಳಿ, ಅನಿರ್ದಿಷ್ಟಾವಧಿ ಉಪವಾಸ ಸತ್ಯಾ ಗ್ರಹ ಮುಂತಾದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.