ತುಮಕೂರು[ಜ.08]  ಬರೋಬ್ಬರಿ 6.5 ಲಕ್ಷ ರೂ. ಮೌಲ್ಯದ ಒಡವೆಯನ್ನು ಹಿಂದುರುಗಿಸಿ ಕಂಡಕ್ಟರ್ ಒಬ್ಬರು ಪ್ರಾಮಾಣಿಕತೆ ಮೆರ೩ಎದಿದ್ದಾರೆ.

ಶಿರಾ ಡಿಪೋ‌ ವ್ಯಾಪ್ತಿಯ ಶ್ರೀಧರ್ ಬಸ್ ನಲ್ಲಿ ದೊರೆತ ಒಡನವೆ ಮಾಲೀಕರಿಗೆ ಹಿಂದಿರುಗಿಸಿದ್ದಾರೆ. ಸೋಮವಾರ ರಾತ್ರಿ ಪಾವಗಡದಿಂದ ಬೆಂಗಳೂರು ಮಾರ್ಗವಾಗಿ ಸಂಚರಿಸಿದ್ದ ಪಾವಗಡ ನಿವಾಸಿ ನಾಗಲತಾ  ಒಡವೆ ಇದ್ದ ವ್ಯಾನಿಟಿ ಬ್ಯಾಗನ್ನು ಬಸ್‌ನಲ್ಲೇ ಮರೆತು ಇಳಿದಿದ್ದರು. ಮಗಳ ಸೀಮಂತಕ್ಕಾಗಿ ನಾಗಲತಾ ಒಡವೆ ತೆಗೆದುಕೊಂಡು ಹೋಗುತ್ತಿದ್ದರು.

KSRTCಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ: ಅರ್ಜಿ ಹಾಕಿ

ಬಸ್  ಡಿಪೋಗೆ ಹೋದಾಗ ಕಂಡಕ್ಟರ್ ಶ್ರೀಧರ್ ಅವರಿಗೆ ಬ್ಯಾಗ್ ಸಿಕ್ಕಿದೆ. ಬ್ಯಾಗ್ ತಂದು ಡಿಪೋ ಮೇಲಧಿಕಾರಿಗಳು ಹಾಗೂ ಪೊಲೀಸರಿಗೆ  ಕಂಡಕ್ಟರ್ ನೀಡಿದ್ದಾರೆ. ನಂತರ ಮಹಿಳೆಗೆ ಕರೆ ಮಾಡಿ ಒಡವೆ ಹಿಂದಿರುಗಿಸಿದ್ದು ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

"