ಕಾಂಗ್ರೆಸ್ ಬಿಡುತ್ತಾರೆಂದರ್ಥ ಹಾಗಂತ ಬಿಜೆಪಿಗೆ ಬರುತ್ತಾರೆಂದಲ್ಲ.

ಶಿವಮೊಗ್ಗ(ಫೆ.16):ಎಂಎಲ್ಸಿ ಗೋವಿಂದ ರಾಜ್ ಮೂಲಕ ಕಾಂಗ್ರೆಸ್ ಹೈಕಮಾಂಡ್ ಗೆ 1 ಸಾವಿರ ಕೋಟಿ ರೂ. ತಲುಪಿಸಿರುವ ಪ್ರಕರಣವನ್ನು ಮುಚ್ಚಿ ಹಾಕಲು ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ಅದಕ್ಕಾಗಿಯೇ ಕೇಂದ್ರ ಸಚಿವ ಅನಂತ ಕುಮಾರ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತಾಡಿರುವ ಸಿಡಿ ತೋರಿಸಿ ಮರೆ ಮಾಚಲು ಯತ್ನಿಸುತ್ತಿದ್ದಾರೆಂದು ವಿಪಕ್ಷ ನಾಯಕ ಈಶ್ವರಪ್ಪ ಶಿವಮೊಗ್ಗದಲ್ಲಿ ಆರೋಪಿಸಿದ್ದಾರೆ.

ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್'ನ ಮಾಜಿ ಸಚಿವ ಕುಮಾರ ಬಂಗಾರಪ್ಪ ಸೇರುವುದಾದರೇ ಸಂತೋಷ. ಕುಮಾರ ಬಂಗಾರಪ್ಪನವರೇ ಹೇಳಿರುವಂತೆ ಮಾಜಿ ಸಿಎಂ ಕೃಷ್ಣ ಹಾದಿಯಲ್ಲಿ ಸಾಗುತ್ತಾರೆಂದರೇ ಕಾಂಗ್ರೆಸ್ ಬಿಡುತ್ತಾರೆಂದರ್ಥ ಹಾಗಂತ ಬಿಜೆಪಿಗೆ ಬರುತ್ತಾರೆಂದಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬೊಬ್ಬರಾಗಿ ಸಮಾಜವಾದಿ ನೆಲೆಗಟ್ಟಿನ ಹಿನ್ನಲೆಯುಳ್ಳ ನಾಯಕರು ಬಿಜೆಪಿ ತೆಕ್ಕೆಗೆ ಬರುತ್ತಿರುವುದು ರಾಜಕೀಯವಾಗಿ ಒಳ್ಳೆಯ ಬೆಳವಣಿಗೆ ಎಂದರು.

ಬಿಜೆಪಿಗೂ ಬಿಗ್ರೇಡ್'ಗೂ ಸಂಬಂಧವಿಲ್ಲ, ಹಾಗೆಯೇ ರಾಜ್ಯದಾದ್ಯಂತ ಯಡಿಯೂರಪ್ಪ ಮತ್ತು ತಾವು ಒಟ್ಟಾಗಿ ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಜಿಲ್ಲಾ ಸಮಾವೇಶ ನಡೆಸಲಿದ್ದೇವೆ. ಬಿಗ್ರೇಡ್ ರಾಜಕೀಯೇತರ ಸಂಘಟನೆಯಾಗಿ ಕೆಲಸ ಮಾಡಲಿದ್ದು ಹಿಂದುಳಿದ, ರಾಜ್ಯದ ಜ್ಯೂನಿಯರ್ ಕಾಲೇಜಿನ 10 ಸಾವಿರ ವಿದ್ಯಾರ್ಥಿಗಳಿಗೆ ತಲಾ 2500 ಸಹಾಯಧನ ನೀಡಲಾಗುವುದೆಂದರು.