Asianet Suvarna News Asianet Suvarna News

ಕಾಂಗ್ರೆಸ್ ಸೋಲಿಗೆ ಸಿದ್ದರಾಮಯ್ಯ ಕಾರಣ

ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯನವರೇ ಕಾರಣ. ಸಾಕಷ್ಟುಮಂದಿ ಹಿಂದುಗಳ ಹತ್ಯೆ ನಡೆಯಿತು, ಗೋಹತ್ಯೆ ನಡೆಯಿತು, ವೀರಶೈವ- ಲಿಂಗಾಯತರನ್ನು ಪ್ರತ್ಯೇಕಿಸಲು ಯತ್ನಿಸಿದಿರಿ. ಇದೆಲ್ಲದರ ಫಲವಾಗಿ ಕಾಂಗ್ರೆಸ್‌ಗೆ ಸೋಲುಂಟಾಯಿತು ಎಂದು ಬಿಜೆಪಿ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

KS EShwarappa Slams Siddaramaiah
Author
Bengaluru, First Published Aug 12, 2018, 10:46 AM IST

ಮೈಸೂರು: ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿದರೆ ಅದಕ್ಕಿಂತಲೂ ಕೆಟ್ಟದಾಗಿ ಮಾತನಾಡಲು ನನಗೂ ಬರುತ್ತದೆ. ಸಿದ್ದರಾಮಯ್ಯ ಪೆದ್ದ, ಹುಚ್ಚ, ಅವನಿಗೆ ಬುದ್ಧಿ ಇಲ್ಲ ಎಂದು ನಾನೂ ಹೇಳಬಹುದು. ಆದರೆ ಆ ಸಂಸ್ಕೃತಿ ನನ್ನದಲ್ಲ, ಸಿದ್ದರಾಮಯ್ಯನವರೇ ನಾಲಿಗೆ ಬಿಗಿ ಹಿಡಿದು ಮಾತನಾಡಿ ಎಂದು ಬಿಜೆಪಿ ನಾಯಕ ಕೆ.ಎಸ್‌. ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯನವರೇ ಕಾರಣ. ಸಾಕಷ್ಟುಮಂದಿ ಹಿಂದುಗಳ ಹತ್ಯೆ ನಡೆಯಿತು, ಗೋಹತ್ಯೆ ನಡೆಯಿತು, ವೀರಶೈವ- ಲಿಂಗಾಯತರನ್ನು ಪ್ರತ್ಯೇಕಿಸಲು ಯತ್ನಿಸಿದಿರಿ. ಇದೆಲ್ಲದರ ಫಲವಾಗಿ ಕಾಂಗ್ರೆಸ್‌ಗೆ ಸೋಲುಂಟಾಯಿತು. ಕಳೆದ ಚುನಾವಣೆಯಲ್ಲಿ ತಾವು ಪರಮೇಶ್ವರ್‌ ಅವರನ್ನು ಸೋಲಿಸಿದರೆ, ಈ ಚುನಾವಣೆಯಲ್ಲಿ ಅವರು ನಿಮ್ಮನ್ನು ಸೋಲಿಸಿದರು ಅಷ್ಟೇ ಎಂದರು.

ಪ್ರಮಾಣ ವಚನಕ್ಕೆ ದುಂದುವೆಚ್ಚ:  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ಮೋದಿ ವಿರೋಧಿ ಬಣದ ನಾಯಕರ ಆತಿಥ್ಯಕ್ಕೆ ದುಂದುವೆಚ್ಚವಾಗಿದೆ. ಜೆಡಿಎಸ್‌ ವತಿಯಿಂದ ಹೋಟೆಲ್‌ಗಳಲ್ಲಿ ಕೊಠಡಿ ಕಾಯ್ದಿರಿಸಿ, ಬಳಿಕ ಸರ್ಕಾರದಿಂದ ಬಿಲ್‌ ಪಾವತಿಸಲು ಮುಂದಾಗಿದ್ದಾರೆ ದೂರಿದರು. 

ಈ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೇವಲ 2 ಗಂಟೆ ಇದ್ದ ನನ್ನ ಆತಿಥ್ಯಕ್ಕೆ .8.73 ಲಕ್ಷ ವೆಚ್ಚ ಹೇಗೆ ಆಯಿತು. ಈ ಬಗ್ಗೆ ತನಿಖೆ ನಡೆಸಿ ಎಂದು ಅವರೇ ಹೇಳಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ಅವರಿಗೆ, ಮದ್ಯ ಪೂರೈಸಲು .75 ಸಾವಿರ ವೆಚ್ಚವಾಗಿದೆ. ಸೀತಾರಾಮ ಯಚೂರಿ ಅವರಿಗೆ 64 ಸಾವಿರ ವೆಚ್ಚ ತೋರಿಸಲಾಗಿದೆ. ಇದರ ಬಗ್ಗೆ ಅತಿಥ್ಯ ಸ್ವೀಕರಿಸಿದವರೇ ಆಶ್ಚರ್ಯಪಟ್ಟಿದ್ದಾರೆ. ಇಷ್ಟೊಂದು ದುಬಾರಿ ಬಿಲ್‌ಗೆ ಸಹಿ ಹಾಕಲು ಸಾಧ್ಯವಿಲ್ಲ ಎಂದು ರತ್ನಪ್ರಭ ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ ಎಂದರು.

Follow Us:
Download App:
  • android
  • ios