ಕಾಂಗ್ರೆಸ್ ಮುಖಂಡ ಪರಮೇಶ್ವರ್ ಸೋಲಿಸಿದ್ದು ಇದೇ ಸಿದ್ದರಾಮಯ್ಯ..!

First Published 5, Mar 2018, 1:11 PM IST
KS Eshwarappa Slams CM Siddaramaiah
Highlights

ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ ಅವರ ನಡವಳಿಕೆಯೇ ಸರಿ ಇಲ್ಲ. ಅವರ ಮೈಯಲ್ಲಿ ಹರಿಯುತ್ತಿರುವುದು ಟಿಪ್ಪುವಿನ ರಕ್ತ, ಆದ್ದರಿಂದ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿದ್ದಾರೆ. ಹಿಂದೂ ಕಾರ್ಯಕರ್ತರ ಕೊಲೆಗೆ  ಸಿಎಂ ಯಾವುದೇ ರೀತಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಇಂದಿರಾ ಗಾಂಧಿ ಅವರಪ್ಪನ ಕೈಯಲ್ಲೇ ಆರ್’ಎಸ್ಎಸ್ ಬ್ಯಾನ್ ಮಾಡಲು ಆಗಿಲ್ಲ. ಸಿದ್ದರಾಮಯ್ಯ ಏನು ಮಾಡಲು ಸಾಧ್ಯ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಉಡುಪಿ : ಸಿದ್ದರಾಮಯ್ಯ ಅಯೋಗ್ಯ ಮುಖ್ಯಮಂತ್ರಿ ಅವರ ನಡವಳಿಕೆಯೇ ಸರಿ ಇಲ್ಲ. ಅವರ ಮೈಯಲ್ಲಿ ಹರಿಯುತ್ತಿರುವುದು ಟಿಪ್ಪುವಿನ ರಕ್ತ, ಆದ್ದರಿಂದ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿದ್ದಾರೆ. ಹಿಂದೂ ಕಾರ್ಯಕರ್ತರ ಕೊಲೆಗೆ  ಸಿಎಂ ಯಾವುದೇ ರೀತಿಯಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಇಂದಿರಾ ಗಾಂಧಿ ಅವರಪ್ಪನ ಕೈಯಲ್ಲೇ ಆರ್’ಎಸ್ಎಸ್ ಬ್ಯಾನ್ ಮಾಡಲು ಆಗಿಲ್ಲ. ಸಿದ್ದರಾಮಯ್ಯ ಏನು ಮಾಡಲು ಸಾಧ್ಯ ಎಂದು ಬಿಜೆಪಿ ಮುಖಂಡ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಇಬ್ರಾಹಿಂ ಇಂದಿರಾಗಾಂಧಿಗೆ ಅಂತರಾಷ್ಟ್ರೀಯ ಸೂ*** ಎಂದು ಹೇಳಿದ್ದರು. ಅದಕ್ಕೆ ಇವರು ಚಪ್ಪಾಳೆ ಹೊಡೆದಿದ್ದರು. ಕಾಂಗ್ರೆಸ್ ಸೇರದಿದ್ದರೆ ಸಿದ್ದರಾಮಯ್ಯ ಸ್ಥಿತಿ ನಾಯಿಪಾಡಾಗುತ್ತಿತ್ತು ಎಂದು ಈಶ್ವರಪ್ಪ ಹೇಳಿದ್ದಾರೆ.

ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರದಲ್ಲಿ ಸಿಎಂ ಕುರ್ಚಿ ಅಲ್ಲಾಡುತ್ತಿದೆ. ಓಟಿಗಾಗಿ ಜಾತಿ ಧರ್ಮಕ್ಕೆ ಬೆಂಕಿ ಇಡುವುದು ಸುಲಭವಲ್ಲ. ಸಿದ್ದರಾಮಯ್ಯನ ಗಂಡಸ್ತನ ಎಲ್ಲೋಗಿತ್ತು. ಮಠ ಮಂದಿರಗಳ ಸುದ್ದಿಗೆ ಬರುವ ಅವರು ಬೇರೆ ಧರ್ಮಗಳ ಧಾರ್ಮಿಕ ಕೇಂದ್ರಗಳನ್ನು ಯಾಕೆ ಮುಟ್ಟಿ ನೋಡಲ್ಲ. ಸೋನಿಯಾ ಸಿದ್ದರಾಮಯ್ಯನ ತಾಯಿ ಮಹದಾಯಿ ವಿವಾದಕ್ಕೆ ಕಾರಣ. ಸಿದ್ದರಾಮಯ್ಯ ಮೋದಿ ಅವರನ್ನು ನೋಡಿ ಕಲಿಯಲಿ ಎಂದು ವಾಕ್ ಪ್ರಹಾರ ನಡೆಸಿದ್ದಾರೆ.

ಇನ್ನು ಪರಮೇಶ್ವರ್ ಸೋಲಿಗೆ ಸಿದ್ದರಾಮಯ್ಯನವರೇ ಕಾರಣ. ನಾನಲ್ಲ ಎಂದು ತಾಯಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡಿ ಹೇಳಲಿ. ಅವರು ಹೇಳಿದಂತೆ ನಾನು ಕೇಳುತ್ತೇನೆ ಎಂದು ಉಡುಪಿಯಲ್ಲಿ ಈಶ್ವರಪ್ಪ ಸಿಎಂಗೆ ಸವಾಲು ಹಾಕಿದ್ದಾರೆ.

loader