ಸಿದ್ದರಾಮಯ್ಯ ಭಂಡ ಹಾಗೂ ಸುಳ್ಳು ಮುಖ್ಯಮಂತ್ರಿ: ಈಶ್ವರಪ್ಪ

ಅರಕಲಗೂಡು: ರಾಜ್ಯ ಸರ್ಕಾರ ದಲಿತರಿಗೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಬಿಡುಗಡೆ ಮಾಡಿರುವ ಹಣದ ಕುರಿತು ಶ್ವೇತಪತ್ರವನ್ನು ಹೊರಡಿಸಲಿ. ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರಕ್ಕಿಂತ ಹೆಚ್ಚು ಹಣವನ್ನು ಬಿಡುಗಡೆ ಮಾಡಿದ್ದು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಸವಾಲು ಹಾಕಿದರು.

ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ದಲಿತರು ಮತ್ತು ಹಿಂದುಳಿದ ವರ್ಗಗಳು ಹಾಗೂ ರೈತರ ಜೀವನವನ್ನು ಮುಗಿಸಿದ ಹಾಗೂ ಜಾತಿ ವ್ಯಾಮೋಹದ ಲಾಭ ಪಡೆದ ಸಿಎಂ ಸಿದ್ದರಾಮಯ್ಯ ದಲಿತರ ಮತ್ತು ಹಿಂದುಳಿದ ವರ್ಗಗಳ ಮಠಗಳ ಮಠಾಧೀಶರಿಗೆ ಜಮೀನು ಮತ್ತು ಹಣವನ್ನು ನೀಡುವ ಆಮಿಷ ಒಡ್ಡುತ್ತಿದ್ದಾರೆ. ಅವರೊಬ್ಬ ಭಂಡ ಹಾಗೂ ಸುಳ್ಳು ಮುಖ್ಯಮಂತ್ರಿ. ಮುಸಲ್ಮಾನರ ಓಲೈಕೆಗೆ ಬಿದ್ದಿರುವ ಕಾಂಗ್ರೆಸ್ ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಗೂಂಡಾಗಳ ರಕ್ಷಣೆ ಮಾಡುತ್ತಿದೆ ಎಂದರು.