ತೀವ್ರ ಕುತೂಹಲ ಕೆರಳಿಸಿದ್ದರ ಸಾರಾ, ಬಿಜೆಪಿ ನಾಯಕರ ಭೇಟಿ| ಸಾರಾ ಭೇಟಿ ಹಿಂದಿನ ರಹಸ್ಯ ಬಿಚ್ಚಿಟ್ಟ ಈಶ್ವರಪ್ಪ!
ಶಿವಮೊಗ್ಗ[ಜು.14]: ಸಚಿವ ಸಾ.ರಾ. ಮಹೇಶ್ ಅವರು ಶಿವಮೊಗ್ಗ ಕಲ್ಲಹಳ್ಳಿ ದೇವಸ್ಥಾನಕ್ಕೆ ದುಡ್ಡು ನೀಡುತ್ತೇನಿ ಎಂದಿದ್ದರು. ಮೊನ್ನೆ ಆಕಸ್ಮಿಕವಾಗಿ ಸಿಕ್ಕಾಗ ಇದನ್ನು ಕೇಳಿದ್ದೇನೆ ಅಷ್ಟೇ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು, ಮುರುಳೀಧರ ರಾವ್ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಸಾ.ರಾ.ಮಹೇಶ್ ಸಿಕ್ಕರು. ಅವರು ಭಾರತೀಯ ಜನತಾಪಕ್ಷದ ಕಾರ್ಯಕರ್ತರಾಗಿದ್ದವರು. ಈಗ ಜೆಡಿಎಸ್‌ಗೆ ಹೋಗಿದ್ದಾರೆ. ದೇವಸ್ಥಾನಕ್ಕೆ ದುಡ್ಡು ಕೊಡ್ತೀನಿ ಎಂದಿದ್ದರು. ಕೊಡಲ್ವೇನಯ್ಯ ಎಂದು ಕೇಳಿದೆ. ಕೊಡ್ತೀನಣ್ಣ ಎಂದರು. ಮಾತಾಡಿದ್ದು ಹೌದು. ಇದರಲ್ಲಿ ಏನು ತಪ್ಪಿದೆ ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಂಗಳೂರಿನಲ್ಲಿ ಈಶ್ವರಪ್ಪ, ಸಾ.ರಾ. ಮಹೇಶ್ ಭೇಟಿ ಮಾಡಿದ್ದು ತೀವ್ರ ಸಂಚಲನಕ್ಕೆ ಕಾರಣವಾಗಿತ್ತು.
