ಬಾಗಲಕೋಟೆ, (ಮಾ.09): ಮಾಜಿ ಸಿಎಂ ಸಿದ್ದರಾಮಯ್ಯಗೆ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ರಾಜಕೀಯ ಸವಾಲ್ ಹಾಕಿದ್ದಾರೆ.

ಇಂದು (ಶನಿವಾರ) ಬಾಗಲಕೋಟೆಯಲ್ಲಿ ಮಾತನಾಡಿದ ಈಶ್ವರಪ್ಪ, 'ಬಾದಾಮಿ ಕ್ಷೇತ್ರಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಲಿ, ನಾನು ಶಿವಮೊಗ್ಗ ಕ್ಷೇತ್ರಕ್ಕೆ  ರಾಜೀನಾಮೆ ನೀಡ್ತೇನೆ. ತಾಕತ್ ಇದ್ರೆ ಮತ್ತೊಮ್ಮೆ ಗೆದ್ದು ಬರಲಿ ಎಂದು ಸವಾಲ್ ಹಾಕಿದರು.

ಸಿದ್ದರಾಮಯ್ಯ ಈ ಸವಾಲನ್ನು ಈಶ್ವರಪ್ಪ ಸ್ವೀಕರಿಸ್ತಾರಾ?

ಸಿದ್ದರಾಮಯ್ಯ ಮತ್ತೇ ಬಾದಾಮಿಯಲ್ಲಿ ಗೆದ್ದರೆ  ರಾಜಕೀಯ ಸನ್ಯಾಸ ಸ್ವೀಕರಿಸ್ತೀನಿ.  ಶಿವಮೊಗ್ಗದಲ್ಲಿ ನಾನು ಸೋತ್ರೆ ರಾಜಕೀಯ ಸನ್ಯಾಸ ಸ್ವೀಕರಿಸ್ತೇನೆ ಎಂದು ಸಿದ್ದರಾಮಯ್ಯಗೆ ಈಶ್ವರಪ್ಪ ರಾಜಕೀಯ ಸಂನ್ಯಾಸದ ಸವಾಲು ಎಸೆದರು.

ಶಿವಮೊಗ್ಗದಲ್ಲಿ ಬಿಜೆಪಿ ಕೆಜೆಪಿ ಓಟ್ ಡಿವೈಡ್ ಆಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿತ್ತು. ಈಗ ಒಟ್ಟಾಗಿ ಗೆದ್ದು ಬಂದಿದ್ದೇವೆ. ಚಾಮುಂಡೇಶ್ವರಿ ಸೋಲಿನ ಭಯದಿಂದ ಇಲ್ಲಿಗೆ ಬಂದ್ರಿ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು.

ನನಗೆ ಲೋಕಸಭೆಗೆ ನಿಲ್ಲೋಕೆ ಆಸಕ್ತಿ ಇಲ್ಲ.  ತಾಕತ್ ಇದ್ರೆ ಸಿದ್ದರಾಮಯ್ಯ ಬಾಗಲಕೋಟೆಗೆ ನಿಲ್ಲಲಿ. ನಾವು ಗೆದ್ದು ತೋರಿಸುತ್ತೇವೆ ಎಂದು ಹರಿಹಾಯ್ದರು.