Asianet Suvarna News Asianet Suvarna News

ಕರುನಾಡಲ್ಲಿ ಪಾತಾಳಕ್ಕೆ ಕುಸಿದ ಕಾವೇರಿ :50 ವರ್ಷದ ಹಿಂದಿನ ಸ್ಥಿತಿ ಉದ್ಭವ

ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತರಿಗೆ ಮುಂದಿನ ಮುಂಗಾರು ಆರಂಭವಾಗುವ ತನಕ ಬೆಳೆಗೆ ನೀರು ಸಿಗುವುದು ಕಷ್ಟವಾಗಿದೆ. ಅದರಲ್ಲೂ ಕಾವೇರಿ ಜಲಾನಯನಕ್ಕೆ ಒಳಪಡುವ ಹೇಮಾ​ವ​ತಿ​ಯಲ್ಲಿ ಸುಮಾರು 52,360 ಎಕರೆ ಪೈಕಿ 8,446 ಎಕರೆಗೆ ಮಾತ್ರ ಕಳೆದ ಜು. 23 ರಿಂದ ಸೆ.11 ರವರೆಗೆ ನೀರು ಹರಿಸಿ ನಿಲ್ಲಿಸಲಾಗಿದೆ. ಪರಿಣಾಮ ಅರಕಲಗೂಡು, ಹೊಳೆನರಸೀಪುರ, ಕೆ.ಆರ್‌. ಪೇಟೆ ಮತ್ತು ಕೆ.ಆರ್‌. ನಗರ ತಾಲೂಕಿನ ರೈತರ ಬೆಳೆ ನೀರಿನಲ್ಲದೆ ಒಣಗಿದೆ.

KRS Dam very below at 50 years

- ಉತ್ತನಹಳ್ಳಿ ಮಹದೇವ

ಕೆಆರ್‌ಎಸ್‌/ಗೊರೂರು: ಕಾವೇರಿ ಒಡಲಿನಿಂದ ತಮಿಳುನಾಡಿಗೆ ಹರಿಯುತ್ತಿದ್ದ ನೀರು ಸ್ಥಗಿತವಾಗಿದ್ದರೂ ಜೀವನದಿ ಮೊಗದಲ್ಲಿ ಐದು ದಶಕದ ಹಿಂದಿನ ಕರಿಛಾಯೆ ಕಡಿಮೆಯಾಗಿಲ್ಲ. ಅಚ್ಚರಿ ಎಂದರೆ ಕಾವೇರಿ ನೀರಿನ ಮಟ್ಟ50 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಅತ್ಯಂತ ದುಸ್ಥಿತಿಯ ಮಟ್ಟಕ್ಕೆ ಇಳಿಯಲಾರಂಭಿಸಿದೆ.

1966ರ ಸೆ. 26 ರಂದು ಕೆಆರ್‌ಎಸ್‌ ನೀರಿನ ಮಟ್ಟ83.05 ಅಡಿ ತಲುಪಿದ್ದನ್ನು ಬಿಟ್ಟರೆ 50 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸೆಪ್ಟೆಂಬರ್‌ ಮಾಹೆಯಲ್ಲಿ (2016ರ ಸೆ. 26 ರಂದು) ಕೆಆರ್‌ಎಸ್‌ ನೀರಿನ ಮಟ್ಟ87.68 ಅಡಿಗೆ ಇಳಿಯುವ ಮೂಲಕ ರೈತರನ್ನು ಮತ್ತಷ್ಟುಕಂಗಾಲಾಗುವಂತೆ ಮಾಡಿದೆ!9/26/2016 9:02:00 Pಋ

ಕಾವೇರಿ ವಿಚಾರವಾಗಿ ಇತ್ತೀಚೆಗೆ ರಾಜ್ಯ ಸರ್ಕಾರ ತೆಗೆದುಕೊಂಡ ಐತಿಹಾಸಿಕ ನಿಲುವು ಒಂದು ಕಡೆಯಾದರೆ, ಕಾವೇರಿ ವಿಚಾರವು ಸೆ. 27 ರಂದು ಮತ್ತೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಇಂಥ ಸಂದರ್ಭದಲ್ಲೆ ಕೆಆರ್‌ಎಸ್‌ ನೀರಿನ ಮಟ್ಟಅಧೋಗತಿಗೆ ಇಳಿದಿರುವುದು ಕುಡಿಯುವ ನೀರಿಗೂ ತತ್ವಾರ ಪಡುವ ಸ್ಥಿತಿಯನ್ನು ಎತ್ತಿ ತೋರಿಸಿದೆ.

ಕೆಆರ್‌ಎಸ್‌ ಅಣೆಕಟ್ಟೆಯ ಪ್ರಸ್ತುತ ಸಂಗ್ರಹಣಾ ಸಾಮರ್ಥ್ಯ 14.602 ಟಿಎಂಸಿಯಷ್ಟಿದ್ದು, ಡೆಡ್‌ ಸ್ಟೋರೆಜ್‌ (60 ಅಡಿಗಳ ವರೆಗೆ) 4.401 ಅಡಿ ತಲುಪಿದ್ದು ಇದರಲ್ಲಿ ಉಪಯೋಗಕ್ಕೆ ಬರುವ ನೀರಿನ ಪ್ರಮಾಣ (74 ಅಡಿಗಳ ಮೇಲೆ) 6.223 ಟಿಎಂಸಿ ಮಾತ್ರ. ಸದ್ಯ ಜಲಾಶಯಕ್ಕೆ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ (ಕಾವೇರಿ- 2129, ಹೇಮಾವತಿ- 325, ಲಕ್ಷ್ಮಣತೀರ್ಥ- 6 ಕ್ಯುಸೆಕ್‌) 2460 ಕ್ಯುಸೆಕ್‌ ಇದ್ದರೆ, ಹೊರ ಹರಿವಿನ ಪ್ರಮಾಣ (ಮೈಸೂರು ಮತ್ತು ಬೆಂಗಳೂರಿಗೆ ಕುಡಿಯುವ ನೀರು) 269 ಕ್ಯುಸೆಕ್‌ ನಷ್ಟಿದೆ. ಈಗಿನ ನೀರನ್ನೇ ಬಳಸಿದಲ್ಲಿ ಮುಂದಿನ ವರ್ಷದ ಮೇ ತಿಂಗಳವರೆಗೆ ಕುಡಿಯಲು ಬಳಸಬಹುದಾದ 30 ಟಿಎಂಸಿ ನೀರು ರಾಜ್ಯಕ್ಕೆ ಲಭ್ಯವಾಗಲಿದೆ.

ರೈತರಿಗೆ ದಕ್ಕದ ನೀರು: ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತರಿಗೆ ಮುಂದಿನ ಮುಂಗಾರು ಆರಂಭವಾಗುವ ತನಕ ಬೆಳೆಗೆ ನೀರು ಸಿಗುವುದು ಕಷ್ಟವಾಗಿದೆ. ಅದರಲ್ಲೂ ಕಾವೇರಿ ಜಲಾನಯನಕ್ಕೆ ಒಳಪಡುವ ಹೇಮಾ​ವ​ತಿ​ಯಲ್ಲಿ ಸುಮಾರು 52,360 ಎಕರೆ ಪೈಕಿ 8,446 ಎಕರೆಗೆ ಮಾತ್ರ ಕಳೆದ ಜು. 23 ರಿಂದ ಸೆ.11 ರವರೆಗೆ ನೀರು ಹರಿಸಿ ನಿಲ್ಲಿಸಲಾಗಿದೆ. ಪರಿಣಾಮ ಅರಕಲಗೂಡು, ಹೊಳೆನರಸೀಪುರ, ಕೆ.ಆರ್‌. ಪೇಟೆ ಮತ್ತು ಕೆ.ಆರ್‌. ನಗರ ತಾಲೂಕಿನ ರೈತರ ಬೆಳೆ ನೀರಿನಲ್ಲದೆ ಒಣಗಿದೆ.

ಪ್ರಸ್ತುತ ನೀರಿನ ಲಭ್ಯತೆ (ಟಿಎಂಸಿಗಳಲ್ಲಿ)

ಜಲಾಶಯಗಳು ನೀರಿನ ಲಭ್ಯತೆ ಡೆಡ್‌ ಸ್ಟೋರೇಜ್‌

ಕೆಆರ್‌ಎಸ್‌ 14.602 6.223

ಕಬಿನಿ 11.879 2.067

ಹಾರಂಗಿ 5.548 3.305

ಹೇಮಾವತಿ 7.676 16.393

ಮೈಸೂರು ದಸರಾಗೆ ಪ್ರವೇಶ?

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪ್ರವಾಸಿಗರು ನೋಡಬಯಸುವ ತಾಣಗಳಲ್ಲಿ ಬೃಂದಾವನ ಕೂಡ ಒಂದು. ಆದರೀಗ ಕಾವೇರಿ ವಿವಾದ ಜೀವ ಪಡೆದಿರುವುದರಿಂದ ಕೆಆರ್‌ಎಸ್‌ನಲ್ಲಿ ಸಿಆರ್‌ಪಿಸಿ ಸೆಕ್ಷನ್‌ 144 ಜಾರಿಗೊಳಿಸಲಾಗಿದೆ. ಹೀಗಾಗಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಿದ್ದು, ಒಂದು ವೇಳೆ ಕಾವೇರಿ ವಿವಾದ ತಣ್ಣಗಾದರೆ ಸೆ. 28 ರಿಂದ ಪ್ರವೇಶ ಕಲ್ಪಿಸುವ ಬಗ್ಗೆ ಸರ್ಕಾರ ಚಿಂತಿಸಿದೆ.

ಕೆಆರ್‌ಎಸ್‌ಗೆ ಸಾಮಾನ್ಯ ದಿನಗಳಲ್ಲಿ ನಿತ್ಯ 6 ಸಾವಿರ ಮಂದಿ, ವಾರಂತ್ಯ ದಿನಗಳಲ್ಲಿ 25 ಸಾವಿರ ಮಂದಿ ಹಾಗೂ ವಿಜಯದಶಮಿಯ ಎರಡು ದಿನಗಳಂದು 40 ರಿಂದ 50 ಸಾವಿರ ಮಂದಿ ಭೇಟಿ ನೀಡುವುದು ಈ ಹಿಂದಿನ ಅಂಕಿ ಅಂಶದಿಂದ ತಿಳಿದು ಬಂದಿದೆ.

ಕಳೆದ 50 ವರ್ಷಗಳಲ್ಲೆ ಸೆಪ್ಟಂಬರ್‌ ಮಾಹೆಯಲ್ಲಿ ಕೆಆರ್‌ಎಸ್‌ ನೀರಿನ ಮಟ್ಟಇಳಿಮುಖವಾಗಿರುವುದ ಇದೇ ಮೊದಲು. ಸದ್ಯದ ನೀರನ್ನು ಕುಡಿಯಲು ಮಾತ್ರ ಬಳಸಬಹುದಾಗಿದೆ. ಹೀಗಾಗಿ ಮೇ ವರೆಗೆ ಕುಡಿಯುವ ನೀರಿಗೆ ತೊಂದರೆ ಇಲ್ಲ.

- ಆರ್‌. ಶಿವಶಂಕರ್‌, ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್‌

Latest Videos
Follow Us:
Download App:
  • android
  • ios