Asianet Suvarna News Asianet Suvarna News

ಬರ ಪರಿಹಾರ ಕೋರಿ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿದ ಕೃಷ್ಣಬೈರೇಗೌಡ

ರಾಜ್ಯ ಸರ್ಕಾರ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಹಿಂಗಾರು ನಷ್ಟ  ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ದಿಂದ ಎಸ್ ಡಿ ಆರ್ ಎಫ್ ನಿಯಮಗಳ ಅಡಿಯಲ್ಲಿ 3310 ಕೋಟಿ ಪರಿಹಾರ ಕೇಳಿದೆ.

Krishne Bairegowda Met Union Agricultural Minister

ಬೆಂಗಳೂರು (ಫೆ.02): ರಾಜ್ಯ ಸರ್ಕಾರ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಹಿಂಗಾರು ನಷ್ಟ  ಪರಿಹಾರಕ್ಕಾಗಿ ಕೇಂದ್ರ ಸರ್ಕಾರ ದಿಂದ ಎಸ್ ಡಿ ಆರ್ ಎಫ್ ನಿಯಮಗಳ ಅಡಿಯಲ್ಲಿ 3310 ಕೋಟಿ ಪರಿಹಾರ ಕೇಳಿದೆ.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕೃಷಿ ಸಚಿವ ಕೃಷ್ಣ ಭೈರೇಗೌಡರು ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು ಭೇಟಿಯಾಗಿದ್ದಾರೆ. ರಾಜ್ಯದಲ್ಲಿ ಹಿಂಗಾರು ನಷ್ಟದಿಂದ ಒಟ್ಟು 7097 ಕೋಟಿ ನಷ್ಟವಾಗಿದೆ. ಬೆಳೆ ನಾಶಕ್ಕೆ 919 ಕೋಟಿ, ಕುಡಿಯುವ ನೀರಿಗೆ  2164 ಕೋಟಿ ಪರಿಹಾರ ನೀಡುವಂತೆ  ರಾಜ್ಯ ಸರ್ಕಾರ ಕೇಳಿದೆ. ಹಿಂಗಾರಿನಲ್ಲಿ ರಾಜ್ಯದಲ್ಲಿ 160 ತಾಲೂಕು ಬರ ಪೀಡಿತವಾಗಿವೆ. ಇದುವರೆಗೂ ಕೇಂದ್ರ ಸರ್ಕಾರ ಮುಂಗಾರು ಪರಿಹಾರಕ್ಕೆ ಘೋಷಿಸಿದ್ದ ಹಣವನ್ನು ಇನ್ನು ಬಿಡುಗಡೆ ಮಾಡಿಲ್ಲ. ಬಿಜೆಪಿಯವರು ಹಣ ಬಿಡುಗಡೆ ಆದೇಶ ಪತ್ರ ಕೊಡಿಸಿದಲ್ಲಿ ನೂರು ನಮಸ್ಕಾರ ಹಾಕುತ್ತೇನೆ ಎಂದು ಕೃಷ್ಣಬೈರೇ ಗೌಡ ಹೇಳಿದ್ದಾರೆ.

Follow Us:
Download App:
  • android
  • ios