ಬೆಂಗಳೂರು (ಫೆ.17): ಹ್ಯಾರಿಸ್ ಪುತ್ರನ ದಾದಾಗಿರಿ ಆಯ್ತು ಈಗ ಸಚಿವ ಕೃಷ್ಣಭೈರೇಗೌಡನ ಬೆಂಬಲಿಗನ ರೌಡಿಸಂ ಶುರುವಾಗಿದೆ. 

ರಸ್ತೆ ಕಾಮಗಾರಿ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕೃಷ್ಣಭೈರೇಗೌಡ  ಬೆಂಬಲಿಗ ಮುನಿರಾಜು ಹಲ್ಲೆ ನಡೆಸಿದ್ದಾರೆ.  ಬಿಜೆಪಿ ಬೆಂಬಲಿಗನಿಗೆ ಕಾಲಿನಿಂದ ಒದ್ದು, ಕಪಾಳಕ್ಕೆ ಹೊಡೆದು ಹಲ್ಲೆ ನಡೆಸಿದ್ದಾರೆ ಮುನಿರಾಜು. 

ಕೆಂಪಾಪುರ ದಾಸರಹಳ್ಳಿ ರಸ್ತೆಯನ್ನ ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಜಗಳ  ಶುರುವಾಗಿದೆ. ದೊಡ್ಡ ರಸ್ತೆಯನ್ನ ಕಿರಿದಾದ ರಸ್ತೆ ಮಾಡಲು ಮುಂದಾಗಿದ್ದನ್ನ ಬಿಜೆಪಿ ಕಾರ್ಯಕರ್ತ  ಕಾಂತರಾಜು ಪ್ರಶ್ನಿಸಿದ್ದರು.  ಈ ವೇಳೆ ಕಾಂತರಾಜು ಮೇಲೆ ಮುನಿರಾಜು  ಹಲ್ಲೆ ನಡೆಸಿದ್ದಾರೆ. ಈ  ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.  ದೃಶ್ಯ ಸಹಿತ ದೂರು ನೀಡಲು ಹೋದರೆ ಪೊಲೀಸರು ಕಂಪ್ಲೇಂಟ್ ಸ್ವೀಕರಿಸಲು ನಿರಾಕರಿಸಿದ್ದಾರೆ.  ಪೊಲೀಸರ ವರ್ತನೆ ವಿರುದ್ಧ ಬಿಜೆಪಿ  ಕಾರ್ಯಕರ್ತರು ಅಮೃತಹಳ್ಳಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.