ಬೆಂಗಳೂರಿನಲ್ಲಿ ನಿಲ್ಲದ ಕಾಂಗ್ರೆಸ್ ಗೂಂಡಾಗಿರಿ : ವ್ಯಕ್ತಿಯೊಬ್ಬನ ಮೇಲೆ 8 ಮಂದಿಯಿಂದ ಹಲ್ಲೆ

First Published 2, Mar 2018, 4:49 PM IST
KR Purm Congress Goondagiri
Highlights

ವಿಜಿನಾಪುರದ ಮುರುಗನ್ ದೇವಾಸ್ಥಾನದ ಬಳಿ ಕಾಂಗ್ರೆಸ್ ಮುಖಂಡ ಮುನಿರಾಜು ಎಂಬುವರು ಮಗ ಅಭಿ ಮತ್ತು ಆತನ ಗ್ಯಾಂಗ್'ನಿಂದ ಕೃತ್ಯ ನಡೆದಿದೆ

ಬೆಂಗಳೂರು(ಮಾ.02): ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ಮತ್ತೆ ಮುಂದುವರಿದಿದೆ. ಕೆಆರ್ ಪುರದಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬನ ಮೇಲೆ 8 ಮಂದಿ ಹಲ್ಲೆ ನಡೆಸಿದ್ದಾರೆ.

ಸಯ್ಯದ್ ತಬರೇಜ್ ಹಲ್ಲೆಗೊಳಗಾದ ಯುವಕ. ಮಾ. 27 ರಂದು ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ವಿಜಿನಾಪುರದ ಮುರುಗನ್ ದೇವಾಸ್ಥಾನದ ಬಳಿ ಕಾಂಗ್ರೆಸ್ ಮುಖಂಡ ಮುನಿರಾಜು ಎಂಬುವರು ಮಗ ಅಭಿ ಮತ್ತು ಆತನ ಗ್ಯಾಂಗ್'ನಿಂದ ಕೃತ್ಯ ನಡೆದಿದೆ. ಹಲ್ಲೆ ನಡೆಸಿದ ಪರಿಣಾಮ ತಲೆಗೆ ತೀವ್ರವಾದ ಪೆಟ್ಟು ಬಿದ್ದು 5 ಹೊಲಿಗೆ ಹಾಕಲಾಗಿದೆ. ಕೈ ಕಾಲುಗಳಿಗೆ ಗಂಭಿರ ಸ್ವರೂಪದ ಗಾಯವಾಗಿದೆ.

ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಪೊಲೀಸರು ಅಭಿ, ಮಹೇಂದ್ರ, ಪುಟ್ಟ, ಅಖಿಲ್ ಎಂಬುವವರನ್ನು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳದೆ ವಾಪಸ್ ಕಳಿಸಿದ್ದಾರೆ.

loader