ಹೈಕೋರ್ಟ್ ಅಭ್ಯರ್ಥಿಗಳು ಮತ್ತು ಮೌಲ್ಯಮಾಪಕರ ನಡುವೆ ಸಂಬಂಧ ಇತ್ತೆ ಎಂಬುದರ ಬಗ್ಗೆ ವಿಚಾರಣೆ ನಡೆಸಿ ಮೂರು ತಿಂಗಳೊಳಗೆ ಈ‌ ಬಗ್ಗೆ ತೀರ್ಮಾನ ಕೈಗೊಳ್ಳಲಿ ಎಂದು ತಿಳಿಸಿದೆ.

ನವದೆಹಲಿ : 2011 ರ ಕೆಪಿಎಸ್ಸಿಯ 363 ಅಭ್ಯರ್ಥಿಗಳ‌ ಆಯ್ಕೆಯನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಮಾನವನ್ನು ಸುಪ್ರಿಂ ಕೋರ್ಟ್ ಬಹುತೇಕ ಎತ್ತಿ ಹಿಡಿದಿದ್ದು ಲಿಖಿತ ಪರೀಕ್ಷೆಯ ಬಗ್ಗೆಯೂ ಹೈ ಕೋರ್ಟ್ ವಿಚಾರಣೆ ನಡೆಸಲಿ ಎಂದು ಹೇಳಿದೆ.

ಸುಪ್ರೀಂ ಕೋರ್ಟ್'ನ ಗೊಯಲ್ ಮತ್ತು ರೊಹಿಂಗ್ಟನ್ ನೇತೃತ್ವದ ದ್ವಿಸದಸ್ಯ ಪೀಠ 2011 ಕೆಪಿಎಸ್ಸಿ ನೇಮಕಾತಿಯಲ್ಲಿ ಅವ್ಯವಹಾರ ನಡೆದ ಬಗ್ಗೆ ಅರ್ಜಿ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ. ಹೈಕೋರ್ಟ್ ಅಭ್ಯರ್ಥಿಗಳು ಮತ್ತು ಮೌಲ್ಯಮಾಪಕರ ನಡುವೆ ಸಂಬಂಧ ಇತ್ತೆ ಎಂಬುದರ ಬಗ್ಗೆ ವಿಚಾರಣೆ ನಡೆಸಿ ಮೂರು ತಿಂಗಳೊಳಗೆ ಈ‌ ಬಗ್ಗೆ ತೀರ್ಮಾನ ಕೈಗೊಳ್ಳಲಿ ಎಂದು ತಿಳಿಸಿದೆ.