ಅಕ್ಟೋಬರ್ 16, 2017ರಂದು ದಾವಣಗೆರೆ ನೂತನ್ ಪರೀಕ್ಷಾ ಕೇಂದ್ರದಲ್ಲಿ ನಡೆದಿದ್ದ ಅಕ್ರಮ ಮೈಕ್ರೋ ಪೋನ್ ಬಳಿಸಿ ಸಾಮೂಹಿಕ ನಕಲು ಮಾಡಲಾಗಿತ್ತು

ದಾವಣಗೆರೆ[ಜೂ.14]: ಕೆಪಿಎಸ್ಸಿ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಕೆಎಎಸ್ ಅಧಿಕಾರಿಯೊಬ್ಬರನ್ನು ದಾವಣಗೆರೆ ಡಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಗ್ಯ ಮತ್ತು ಕುಟುಂಬ ಇಲಾಖೆಯ ಉಪ ಕಾರ್ಯದರ್ಶಿ ರಾಮಚಂದ್ರಯ್ಯ ಬಂಧಿತ ಅಧಿಕಾರಿ. ಅಕ್ಟೋಬರ್ 16, 2017ರಂದು ದಾವಣಗೆರೆ ನೂತನ್ ಪರೀಕ್ಷಾ ಕೇಂದ್ರದಲ್ಲಿ ಮೈಕ್ರೋ ಪೋನ್ ಬಳಿಸಿ ಸಾಮೂಹಿಕ ನಕಲು ಪ್ರಕರಣ ಪತ್ತೆಯಾಗಿತ್ತು. ಈ ಪ್ರಕರಣದಲ್ಲಿ ರಾಮಚಂದ್ರಯ್ಯ ಕಿಂಗ್ ಪಿನ್ ಆಗಿದ್ದರು.

ಈ ಬಗ್ಗೆ ನಗರದ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.