ಸಿಎಂ ಹೇಳಿಕೆಯಿಂದ ಜೀವಕ್ಕೆ ಅಪಾಯ: ಶಂಕರ ಮುನವಳ್ಳಿ

KPCC Shankar Munavalli Slams CM Siddaramaiah
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ತನ್ನ ಜೀವಕ್ಕೆ ಅಪಾಯವಿದ್ದು, ತನಗೆ ಸೂಕ್ತ ಭದ್ರತೆ ಒದಗಿಸುವುದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಕೆಪಿಸಿಸಿ ಶಂಕರ ಮುನವಳ್ಳಿ ಬುಧವಾರ ಡಿಸಿಪಿ ಎಸ್‌.ಬಿ.ಪಾಟೀಲ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯಿಂದ ತನ್ನ ಜೀವಕ್ಕೆ ಅಪಾಯವಿದ್ದು, ತನಗೆ ಸೂಕ್ತ ಭದ್ರತೆ ಒದಗಿಸುವುದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದು ಕೆಪಿಸಿಸಿ ಶಂಕರ ಮುನವಳ್ಳಿ ಬುಧವಾರ ಡಿಸಿಪಿ ಎಸ್‌.ಬಿ.ಪಾಟೀಲ್‌ ಅವರಿಗೆ ಮನವಿ ಸಲ್ಲಿಸಿದ್ದಾರೆ.

ದಲಿತ ಜನಾಂಗಗಳಿಗೆ ಕಾಂಗ್ರೆಸ್‌ ಪಕ್ಷದಿಂದ ಆದ ಅನ್ಯಾಯ ವಿರೋಧಿಸಿ ಪತ್ರಿಕೆಗಳಿಗೆ ಜಾಹೀರಾತು ಕೊಟ್ಟು ದಲಿತರಲ್ಲಿ ಜನಜಾಗೃತಿಗೆ ಮುಂದಾಗಿದ್ದೇನೆ.

ನನ್ನ ಪ್ರಕಟಣೆ ಅಥವಾ ಜಾಹೀರಾತು ವ್ಯಾಪಕವಾಗಿ ದಲಿತರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದು, ಅದೇ ಅಸಹನೆಯಿಂದ ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವ್ಯಗ್ರರಾಗಿದ್ದಾರೆ.

ಈ ಕುರಿತು ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಚರ್ಚಿಸುವಾಗ ಇದನ್ನು ಹೇಗೆ ಮುಗಸ್ತೀರಿ ಮುಗಸ್ರಿ ಎಂಬ ಹೇಳಿಕೆ ನೀಡಿರುವುದು ತನ್ನ ಆಪ್ತ ಮೂಲಗಳಿಂದ ತಿಳಿದು ಬಂದಿದ್ದು ಆತಂಕ ತಂದಿದೆ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

loader