ಬೆಂಗಳೂರು, (ಆ.02): ಕಾಂಗ್ರೆಸ್ ಚಿಹ್ನೆಯಿಂದ ಗೆದ್ದು ರಾಜಿನಾಮೆ ಅನರ್ಹಗೊಂಡಿರುವ ಶಾಸಕರಿಗೆ ಪಾಠ ಕಲಿಸಲು ಕೆಪಿಸಿಸಿ ಮುಂದಾಗಿದೆ. ಹೀಗಾಗಿ ಈಗಿನಿಂದಲೇ ಉಪಚುನಾವಣೆಗೆ ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ.

ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡಿರುವ ಕಾಂಗ್ರೆಸ್‌  ಮತ್ತು ಜೆಡಿಎಸ್‌ನ 17 ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. 

ಹೀಗಾಗಿ ಈ ಎಲ್ಲ ಕ್ಷೇತ್ರಗಳಿಗೂ ಚುನಾವಣೆ ವೀಕ್ಷಕರನ್ನು ನೇಮಕ ಮಾಡಿ ಕಾಂಗ್ರೆಸ್‌ ಪಟ್ಟಿ ಬಿಡುಗಡೆ ಮಾಡಿದೆ.  ಉಪಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ. ಆದ್ರೆ ಈ ಬಗ್ಗೆ ಅಧಿಕೃತವಾಗಿಲ್ಲ.

ಉಪಸಮರಕ್ಕೆ ಕಾಂಗ್ರೆಸ್ ಸಂಭಾವ್ಯರ ಪಟ್ಟಿ ಬಹುತೇಕ ಸಿದ್ಧ

ಗುರುವಾರ ನಡೆದ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ರಾಜ್ಯದ 17 ಕ್ಷೇತ್ರಗಳಿಗೆ ಕಾಂಗ್ರೆಸ್​​ ಉಸ್ತುವಾರಿಗಳ ನೇಮಕ ಮಾಡಿ ಕೆಪಿಸಿಸಿ ಆದೇಶ ಹೊರಡಿಸಿದ್ದು, ಆ ಪಟ್ಟಿ ಈ ಕೆಳಗಿನಂತಿದೆ.

ರಾಜರಾಜೇಶ್ವರಿ ನಗರ – ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್

ಕೆ ಆರ್ ಪುರಂ – ಕೆ.ಜೆ. ಜಾರ್ಜ್ ,ರಾಮಲಿಂಗಾರೆಡ್ಡಿ

ಯಶವಂತಪುರ – ಎಂ. ಕೃಷ್ಣಪ್ಪ, ಜಮೀರ್ ಅಹಮ್ಮದ್‌

ಮಹಾಲಕ್ಷ್ಮಿ ಲೇಔಟ್ – ಮಾಗಡಿ ಬಾಲಕೃಷ್ಣ, ನಜೀರ್ ಅಹಮದ್

ಕೆ.ಆರ್.ಪೇಟೆ – ಚೆಲುವರಾಯಸ್ವಾಮಿ

ಹುಣಸೂರು – ಮಹಾದೇವಪ್ಪ

ರಾಣೇಬೆನ್ನೂರು – ಎಚ್.ಎಂ. ರೇವಣ್ಣ

ಹಿರೇಕೆರೂರು – ಎಚ್. ಕೆ. ಪಾಟೀಲ್

ಅಥಣಿ – ಎಂ.ಬಿ. ಪಾಟೀಲ್

ಕಾಗವಾಡ – ಸತೀಶ್ ಜಾರಕಿಹೊಳಿ

ಗೋಕಾಕ್ – ಶಿವಾನಂದ ಪಾಟೀಲ್, ಸತೀಶ್ ಜಾರಕಿಹೊಳಿ

ಮಸ್ಕಿ – ಈಶ್ವರ ಖಂಡ್ರೆ

ಹೊಸಕೋಟೆ – ಕೃಷ್ಣ ಭೈರೇಗೌಡ, ಡಿ.ಕೆ.ಶಿವಕುಮಾರ್‌

ಹೊಸಪೇಟೆ – ಡಿ.ಕೆ.ಶಿವಕುಮಾರ್‌, ಉಗ್ರಪ್ಪ

ಚಿಕ್ಕಬಳ್ಳಾಪುರ – ರಮೇಶ್ ಕುಮಾರ್

ಶಿವಾಜಿ ನಗರ – ಜಮೀರ್ ಅಹಮ್ಮದ್, ಸಿ.ಎಂ. ಇಬ್ರಾಹಿಂ

ಯಲ್ಲಾಪುರ – ಆರ್‌.ವಿ. ದೇಶಪಾಂಡೆ, ಯು.ಟಿ. ಖಾದರ್.