ಗ್ರಾಮ ವಾಸ್ತವ್ಯಕ್ಕೆ ಹೈಟೆಕ್ ಮನೆಯೊಂದನ್ನ ಆಯ್ಕೆ ಮಾಡಿಕೊಂಡ ಪರಮೇಶ್ವರ್

First Published 24, Jan 2018, 12:06 PM IST
KPCC President Parameshwar Village stay
Highlights

ಹೈಟೆಕ್  ರಾಜಕಾರಣಿ ಆರೋಪ ಹೊತ್ತಿರುವ  ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಇದೀಗ ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣರಾಗಿದ್ದಾರೆ. ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿನ  ಗ್ರಾಮ ವಾಸ್ತವ್ಯಕ್ಕೆ ಹೈಟೆಕ್ ಮನೆಯೊಂದನ್ನ ಆಯ್ಕೆ ಮಾಡಿಕೊಂಡು ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ.

ಬೆಂಗಳೂರು (ಜ.24):  ಹೈಟೆಕ್  ರಾಜಕಾರಣಿ ಆರೋಪ ಹೊತ್ತಿರುವ  ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಇದೀಗ ಮತ್ತೊಮ್ಮೆ ತೀವ್ರ ಚರ್ಚೆಗೆ ಕಾರಣರಾಗಿದ್ದಾರೆ. ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿನ  ಗ್ರಾಮ ವಾಸ್ತವ್ಯಕ್ಕೆ ಹೈಟೆಕ್ ಮನೆಯೊಂದನ್ನ ಆಯ್ಕೆ ಮಾಡಿಕೊಂಡು ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ.

ನಿನ್ನೆ ರಾತ್ರಿ ಪರಮೇಶ್ವರ್ ಅವರ ಕ್ಷೇತ್ರದಲ್ಲಿ ಎರಡನೇ ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ .  ಕಳೆದ ಬಾರಿ ಕೊರಟಗೆರೆ  ತಾಲೂಕಿನ ದೊಗ್ಗನಹಳ್ಳಿಯ ದಲಿತರೊಬ್ಬರ ಚಿಕ್ಕ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು.

ಆದರೆ ಈ ಬಾರಿ ವಾಸ್ತವ್ಯಕ್ಕೆ ಇಡೀ ಗ್ರಾಮದ  ಹೈಟೆಕ್ ಮನೆಯನ್ನು ಆಯ್ಕೆ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಮನೆಯಲ್ಲಿ ಗ್ರಾನೈಟ್, ಹೈಟೆಕ್ ಟಿವಿ,  ಮಂಚ, ಐಶರಾಮಿ ಕೋಣೆಗಳು ಎಲ್ಲಾ ಸೌಕರ್ಯ  ಇದ್ದು, ಪರಮೇಶ್ವರ್’ಗೆ ಸಕಲ ಸೌಕರ್ಯ  ಒದಗಿಸಿದ್ದಾರೆ. ಇದರ ಮಧ್ಯೆ ಕೋಣೆಯೊಂದರಲ್ಲಿ  ಚಾಪೆ ಮೇಲೆ ಮಲಗಿ ಸರಳತೆ ಪ್ರದರ್ಶಿಸಿದ್ದಾರೆ.

loader