ಬೆಂಗಳೂರು[ಜು.23] : ಮುಗಿಯದ ಕಥೆಯಾಗಿರುವ ರಾಜ್ಯದ ರಾಜಕೀಯ ಪ್ರಹಸನವು ಕೊನೆಯಾಗುವ ಲಕ್ಷಣ ಕಾಣುತ್ತಿಲ್ಲ. ಮುಂಬೈ ಸೇರಿದವರ ಮುನಿಸು ಕರಗುತ್ತಿಲ್ಲ, ರಾಜ್ಯ ನಾಯಕರ ಯತ್ನ ನಿಲ್ಲುತ್ತಿಲ್ಲ. ಈ ವೇಳೆ ರಾಜೀನಾಮೆ ನೀಡಿ ಅತೃಪ್ತರಾಗಿ ಹೋದವರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ. 

ರಾಜೀನಾಮೆ ನೀಡಿ ಹೋದವರ ವಿರುದ್ಧ ಗರಂ ಆಗಿರುವ ದಿನೇಶ್ ಗುಂಡೂರಾವ್, ಅವರೆಲ್ಲಾ ಅನರ್ಹತೆಗೊಳ್ಳುವ ಎಲ್ಲಾ ಕೆಲಸ ಮಾಡಿ ಹೋಗಿದ್ದಾರೆ. ಬೆಳೆಸಿದ, ಅಧಿಕಾರ ನೀಡಿದ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದರು. 

ತಮ್ಮದೇ ಸರ್ಕಾರ ಉರುಳಿಸುವ ಯತ್ನ ಮಾಡಿರುವ ರಾಜೀನಾಮೆ ನೀಡಿರುವ ಶಾಸಕರು ಹಣ, ಅಧಿಕಾರದ ಆಸೆಗೆ ದ್ರೋಹ ಮಾಡಿ ಬೇರೆ ಪಕ್ಷ ಸೇರುವ ಯತ್ನ ಮಾಡಿದ್ದಾರೆ. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದರಿಂದ ಅವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕೋ ಅದೇ ರೀತಿ ಕೈಗೊಳ್ಳುತ್ತೇವೆ. ಈ ಬಗ್ಗೆ ತ್ರಿತವಾಗಿ ನಿರ್ಧಾರ ಕೈಗೊಳ್ಳಲು ಸ್ಪೀಕರ್ ರಮೇಶ್ ಕುಮಾರ್ ಅವರಿಗೂ ಮನವಿ ಮಾಡಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.