ರಫೆಲ್ ಒಪ್ಪಂದ ಹಾಳುಗೆಡವಿದ ಮೋದಿಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಆರೋಪರಫೆಲ್ ಡೀಲ್‌ನಲ್ಲಿ ಭ್ರಷ್ಟಾಚಾರದ ಆರೋಪವಿಮಾನ ಬೆಲೆ ಏರಿಸಿ ಭ್ರಷ್ಟಾಚಾರ ಎಸಗಿದ್ದಾರೆ

ಬೆಂಗಳೂರು(ಜು.26): ರಫೆಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಲಾಯನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಆರೋಪಿಸಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ಆದ ಒಪ್ಪಂದದಂತೆ 108 ವಿಮಾನಗಳು ಎಚ್.ಎ.ಎಲ್ ನಲ್ಲಿ ನಿರ್ಮಾಣ ಆಗಬೇಕು. 18 ವಿಮಾನಗಳನ್ನು ಮಾತ್ರ ಫ್ರಾನ್ಸ್ ನಿಂದ ಖರೀದಿಸಲು ನಿರ್ಧರಿಸಲಾಗಿತ್ತು. ಅಲ್ಲದೇ ಪ್ರತೀ ವಿಮಾನಕ್ಕೆ 521 ಕೋಟಿ ನಿಗದಿಯಾಗಿತ್ತು ಎಂದು ಗುಂಡುರಾವ್ ಹೇಳಿದ್ದಾರೆ.

ಆದರೆ ಪ್ರಧಾನಿ ಮೋದಿ ಈ ಒಪ್ಪಂದವನ್ನು ಮುರಿದಿದ್ದು, ಈಗ ರೆಫಲ್ ಯುದ್ಧ ವಿಮಾನ ಖರೀದಿ ದರವನ್ನು ಬಹಿರಂಗಪಡಿಸುತ್ತಿಲ್ಲ ಎಂದು ದಿನೇಶ್ ಆರೋಪಿಸಿದ್ದಾರೆ. ಮೋದಿ ಫ್ರಾನ್ಸ್ ಗೆ ತೆರಳಿ ೩೬ ವಿಮಾನ ಖರಿದಿಸಲು ತೀರ್ಮಾನಿಸಿದ್ದರು. ಈ ಸಂದರ್ಭದಲ್ಲಿ ಮೋದಿ ಜೊತೆ ರಕ್ಷಣಾ ಸಚಿವರ ಬದಲು ಉದ್ಯಮಿ ಅನಿಲ್ ಅಂಬಾನಿ ಇದ್ದರು ಎಂದು ಗುಂಡುರಾವ್ ಲೇವಡಿ ಮಾಡಿದ್ದಾರೆ.

ಈ ವೇಳೆ ಡೆಸಾಲ್ಟ್ ಕಂಪನಿ ವಿಮಾನದ ದರ ನಿಗದಿಪಡಿಸಿದ್ದು, ಇದರ ಪ್ರಕಾರ ಪ್ರತೀ ವಿಮಾನದ ಬೆಲೆ 1670 ಕೋಟಿ ರೂ. ಆಗುತ್ತದೆ. ಹೀಗಾಗಿ ಮೋದಿ ಮಾಡಿಕೊಂಡ ಒಪ್ಪಂದದಲ್ಲಿ ಭ್ರಷ್ಟಾಚಾರ ನಡೆದಿರುವುದು ಗೊತ್ತಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷರು ಗಂಭೀರ ಆರೋಪ ಮಾಡಿದ್ದಾರೆ.