ಡರ್ಟಿ ಡೈರಿ ಪುರಾಣದ ನಡುವೆ ನಾಳೆ ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಸಂಪುಟ ಪುನಾರಚನೆಗೆ ಮನವಿ ಮಾಡಲು ಕೆಪಿಸಿಸಿ ತೀರ್ಮಾನಿಸಿದೆ.
ಬೆಂಗಳೂರು(ಫೆ.25): ಡರ್ಟಿ ಡೈರಿ ಪುರಾಣದ ನಡುವೆ ನಾಳೆ ರಾಜ್ಯ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಸಭೆಯಲ್ಲಿ ಸಂಪುಟ ಪುನಾರಚನೆಗೆ ಮನವಿ ಮಾಡಲು ಕೆಪಿಸಿಸಿ ತೀರ್ಮಾನಿಸಿದೆ.
ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಬಹುದಾದ ವಿಷಯಗಳ ಪಟ್ಟಿಯಲ್ಲಿ 4 ವರ್ಷ ಪೂರೈಸಿದ ಸಚಿವರ ಬದಲಾವಣೆಯೇ ಮೊದಲ ವಿಷಯ. ಸರ್ಕಾರದಲ್ಲಿ 4 ವರ್ಷ ಪೂರೈಸಿದ ಸಚಿವರ ಬದಲಾಯಿಸಿ ಹೊಸ ಮುಖಗಳಿಗೆ ಅವಕಾಶ ನೀಡುವ ವಿಚಾರವೇ ಚರ್ಚೆಯ ಮೊದಲ ವಿಚಾರ.
ಸಮನ್ವಯ ಸಮಿತಿ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹಾಗೂ ಸಮಿತಿಯ ಎಲ್ಲ ಸದಸ್ಯರು ಒಪ್ಪಿದರೆ ಮಾತ್ರ 4 ವರ್ಷ ಪೂರೈಸಿದ ಸಚಿವರಿಗೆ ಗೇಟ್ ಪಾಸ್ ನೀಡಲು ತೀರ್ಮಾನಿಸಲಾಗುತ್ತದೆ. 4 ವರ್ಷ ಪೂರೈಸಿದ ಸಚಿವರನ್ನು ಬದಲಾಯಿಸಿ ಪಕ್ಷದ ಜವಾಬ್ದಾರಿ ನೀಡುವ ವಿಚಾರವೂ ಚರ್ಚೆಗೆ ಬರಲಿದೆ.
ಇನ್ನು, 15 ವಿಧಾನಸಭಾ ಕ್ಷೇತ್ರಗಳ ಸಂಘಟನಾ ಜವಾಬ್ದಾರಿ ನೀಡುವ ಬಗ್ಗೆ ಚರ್ಚಿಸಲು ಕೆಪಿಸಿಸಿ ವತಿಯಿಂದ ಚರ್ಚೆಗೆ ಶಿಫಾರಸು ಮಾಡಲಾಗಿದೆ. ಈ ವಿಷಯಗಳ ಕುರಿತ ಕೆಪಿಸಿಸಿ ಪತ್ರ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ.
