ಆನೆಯನ್ನು ಓಡಿಸಲು ಜನರು ಪಟಾಕಿ ಸಿಡಿಸಿ ಬೊಬ್ಬೆಹಾಕಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಟ್ರಕ್‌ನ ಡ್ರೈವರ್‌ಗಳು ಸುಮ್ಮನೇ ನಿಂತು ಘಟನೆಯನ್ನು ವಿಡಿಯೋ ಮಾಡಬೇಕಾಯಿತು
ಆನೆಗಳು ಆಗಾಗ ಗ್ರಾಮಗಳಿಗೆ ನುಗ್ಗಿ ದಾಂಧಲೆ ಮಾಡುವುದು ಸಾಮಾನ್ಯ. ಆದರೆ, ಬಂಗಾಳದ ಮಂಡಿಪೋರ್ ಜಿಲ್ಲೆಯ ಗರ್ಬೆಟಾ ಅರಣ್ಯದಲ್ಲಿ ಟ್ರಕ್ವೊಂದನ್ನು ಅಡ್ಡಗಟ್ಟಿದ ಆನೆ, ಟ್ರಕ್ಗೆ ಹೊದೆಸಿದ್ದ ಹೊದಿಕೆ ತೆಗೆದು ಅದರಲ್ಲಿದ್ದ ಒಂದಿಷ್ಟು ಆಲೂಗಡ್ಡೆಯನ್ನು ತಿಂದಿದೆ. ಆನೆಯನ್ನು ಓಡಿಸಲು ಜನರು ಪಟಾಕಿ ಸಿಡಿಸಿ ಬೊಬ್ಬೆಹಾಕಿದರೂ ಪ್ರಯೋಜನವಾಗಿಲ್ಲ. ಕೊನೆಗೆ ಟ್ರಕ್ನ ಡ್ರೈವರ್ಗಳು ಸುಮ್ಮನೇ ನಿಂತು ಘಟನೆಯನ್ನು ವಿಡಿಯೋ ಮಾಡಬೇಕಾಯಿತು. ಕೆಲ ಹೊತ್ತಿನ ಬಳಿಕ ಆನೆ ಅಲ್ಲಿಂದ ತೆರಳಿದೆ.
(ಸಾಂದರ್ಭಿಕ ಚಿತ್ರ)
