Asianet Suvarna News Asianet Suvarna News

ರಿಲಯನ್ಸ್ ಜಿಯೋ ಡಿಟಿಎಚ್ ಹಾಕಿಸಿಕೊಂಡರೆ ಆರು ತಿಂಗಳು ಫ್ರೀ!

ಡಿಟಿಎಚ್ಗಾಗಿ ಲಾಗಿನ್ಆಗಿ ಆರು ತಿಂಗಳು ಉಚಿತ ಸೇವೆ ಪಡೆಯಿರಿ ಎನ್ನುವ ಜಾಹೀರಾತು ನೀಡಲಾಗುತ್ತಿದೆ.

KP Viral Check column

ನೂರು ಖುಷಿಯ ವಿಚಾರಗಳಿಗೂ ಒಂದು ನೋವಿನ ವಿಷಯವನ್ನು ಮರೆಸುವುದಕ್ಕಾಗದು. ಹಾಗಾಗಿ ಸಾಧ್ಯವಾದಷ್ಟುನಮ್ಮಿಂದ ಬೇರೆಯವರಿಗೆ ನೋವಾಗದಂತೆ ನಡೆದುಕೊಳ್ಳೋಣ. ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೊ ಸಿಮ್‌ ಭರ್ಜರಿ ಯಶಸ್ಸು ಕಂಡ ಬೆನ್ನಲ್ಲೇ, ರಿಲಯನ್ಸ್‌ ಜಿಯೋ ಡಿಟಿಎಚ್‌ (ಡೈರೆಕ್ಟ್ ಟು ಹೋಮ್‌) ಸೇವೆ ಆರಂಭಿಸಲು ಮುಂದಾಗಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಜಿಯೋ ಸಿಮ್‌ಗೆ ಉಚಿತ ಇಂಟರ್‌ನೆಟ್‌, ಕರೆ ಸೌಲಭ್ಯ ನೀಡಿದ ರೀತಿಯಲ್ಲೇ, ಜಿಯೋ ಡಿಟಿಎಚ್‌ನಲ್ಲೂ ಎಚ್‌ಡಿ ಗುಣಮಟ್ಟದ ಉಚಿತ ಸೆಟ್‌ ಟಾಪ್‌ ಬಾಕ್ಸ್‌, ಆರು ತಿಂಗಳ ಜಿಯೋ ಬ್ರಾಡ್‌ಬ್ಯಾಂಡ್‌, 440ಕ್ಕೂ ಹೆಚ್ಚು ಚಾನಲ್‌ಗಳು ಸಂಪೂರ್ಣ ಉಚಿತ ನೀಡಲಾಗುತ್ತಿದೆ ಎಂಬ ಸುದ್ದಿ ವಾಟ್ಸಪ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಲ್ಲದೇ, ಜಿಯೋ ಡಿಟಿಎಚ್‌ ಸೇವೆ 2017ರ ಮೇ 31ರಂದು ಅಧಿಕೃತವಾಗಿ ಬಿಡುಗಡೆಯಾಗಿದ್ದು, ಇಂದೇ ಅದರ ಚಂದಾದಾರರಾಗಿ ಎಂದು ಪ್ರಚಾರ ಮಾಡಲಾಗುತ್ತಿದೆ. ಈ ಕುರಿತಾದ ಫೋಟೋಗಳು ಮತ್ತು ಲಿಂಕ್‌ಗಳೂ ಒಬ್ಬರಿಂದ ಒಬ್ಬರಿಗೆ ಹರಿದಾಡುತ್ತಿವೆ. 
ಜಿಯೋ ಡಿಟಿಎಚ್‌ ಬಿಡುಗಡೆ ಆಗಿದೆಯೇ?

 

ರಿಲಯನ್ಸ್‌ ಜಿಯೋ ಕಂಪನಿ ಡಿಟಿಎಚ್‌ ಸೇವೆ ಆರಂಭಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದ್ದರೂ ಇನ್ನೂ ಅಧಿಕೃತವಾಗಿ ಡಿಟಿಎಚ್‌ ಸೆಟ್‌ಟಾಪ್‌ ಬಾಕ್ಸ್‌ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯೂ ಬಿಡುಗಡೆಯಾಗಿಲ್ಲ. ಆದರೆ, ಜಿಯೋ ಡಿಟಿಎಚ್‌ ಹೆಸರಿನಲ್ಲಿ ಲಾಭ ಮಾಡಿಕೊಳ್ಳುವ ನಿಟ್ಟಿನಿಂದ ಕೆಲ ವಂಚಕರು ಸಾಮಾಜಿಕ ಜಾಲತಾಣಗಳಲ್ಲಿ ಜಿಯೋ ಡಿಟಿಎಚ್‌ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಡಿಟಿಎಚ್‌ಗಾಗಿ ಲಾಗಿನ್‌ ಆಗಿ ಆರು ತಿಂಗಳು ಉಚಿತ ಸೇವೆ ಪಡೆಯಿರಿ ಎನ್ನುವ ಜಾಹೀರಾತು ನೀಡಲಾಗುತ್ತಿದೆ. ಒಂದು ವೇಳೆ ಜಾಹೀರಾತನ್ನು ನಂಬಿ ವಾಟ್ಸಪ್‌ ಮತ್ತು ಫೇಸ್‌ಬುಕ್‌ಗಳಲ್ಲಿ ಕಳುಹಿಸಿದ ಲಿಂಕ್‌ಗಳನ್ನು ಕ್ಲಿಕ್‌ ಮಾಡಿದರೆ ನೀವು ಮೋಸ ಹೋಗುವುದು ಗ್ಯಾರೆಂಟಿ. 

(ಕನ್ನಡಪ್ರಭ ವೈರಲ್ ಚೆಕ್ ಕಾಲಂ)

Follow Us:
Download App:
  • android
  • ios