ಕಾಂಗ್ರೆಸ್ ಪಕ್ಷಕ್ಕೆ ಕೆ.ಪಿ.ನಂಜುಂಡಿ ಗುಡ್ ಬೈ ಹೇಳಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಕೆ.ಪಿ.ನಂಜುಂಡಿಗೆ, ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಭರವಸೆ ಕಾಂಗ್ರೆಸ್ ನೀಡಿತ್ತು. ಆದರೆ ಭರವಸೆ ಈಡೇರಿಸಲು ಆಗದೇ ಕಾಂಗ್ರೆಸ್ ಪಕ್ಷ ನಂಜುಂಡಿಗೆ ಅನ್ಯಾಯ ಮಾಡಿದೆ ಅಂತ ಬೇಸತ್ತು ನಂಜುಂಡಿ ಕಾಂಗ್ರೆಸ್ ತೊರೆದಿದ್ದಾರೆ.
ಬೆಂಗಳೂರು (ಜೂ.13): ಕಾಂಗ್ರೆಸ್ ಪಕ್ಷಕ್ಕೆ ಕೆ.ಪಿ.ನಂಜುಂಡಿ ಗುಡ್ ಬೈ ಹೇಳಿದ್ದಾರೆ. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಕೆ.ಪಿ.ನಂಜುಂಡಿಗೆ, ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಭರವಸೆ ಕಾಂಗ್ರೆಸ್ ನೀಡಿತ್ತು. ಆದರೆ ಭರವಸೆ ಈಡೇರಿಸಲು ಆಗದೇ ಕಾಂಗ್ರೆಸ್ ಪಕ್ಷ ನಂಜುಂಡಿಗೆ ಅನ್ಯಾಯ ಮಾಡಿದೆ ಅಂತ ಬೇಸತ್ತು ನಂಜುಂಡಿ ಕಾಂಗ್ರೆಸ್ ತೊರೆದಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ನಂಜುಂಡಿ, ಪಕ್ಷಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುವುದಾಗಿ ಘೋಷಿಸಿದರು.ಅಲ್ಲದೇ ಕಾಂಗ್ರೆಸ್ನಲ್ಲೇ 16 ವರ್ಷಗಳ ಕಾಲ ದುಡಿದಿದ್ದೇನೆ. ಕಾಂಗ್ರೆಸ್ ಬಗ್ಗೆ ಬೇಸರವಿಲ್ಲ, ಅಲ್ಲಿರುವ ಜನರ ಬಗ್ಗೆ ಬೇಸರ ಇದೆ ಅಂತ ಹೇಳಿದರು. ಸಮಾಜ ಮುಖಂಡರು ನನಗೆ ಮೊದಲೇ ಕಾಂಗ್ರೆಸ್ ಪಕ್ಷ ಸೇರಬೇಡ ಎಂದು ಹೇಳಿದ್ರು. ಆದರೆ ನಾನೇ ಅವರ ಮನವೊಲಿಸಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಸೂಚಿಸಿದ್ದೆ..ಆದರೆ ಈಗ ನಾನು ಮಾಡಿರುವ ತಪ್ಪಿಗೆ ವಿಶ್ವಕರ್ಮ ಸಮಾಜದವರು ಅನುಭವಿಸುವಂತಾಗಿದೆ. ನಾನು ಇವರ ಕೈಯಲ್ಲೂ ರಾಜೀನಾಮೆ ಕೊಡಲ್ಲ. ನೇರವಾಗಿ ದೆಹಲಿಗೆ ಹೋಗಿ ಸೋನಿಯಾ ಗಾಂಧಿಯವರ ಕೈಯಲ್ಲೇ ರಾಜೀನಾಮೆ ಕೊಟ್ಟು ಬರ್ತೀನಿ. ಸೋನಿಯಾ ಗಾಂಧಿ ಮನವೊಲಿಸಿದ್ರು ಕೂಡ ನಾನು ಹಿಂತಿರುಗಿ ಬರಲ್ಲ ಅಂತ ಗುಡುಗಿದ್ದಾರೆ.
