ನೀರವ್​ ಮೋದಿ, ಮಲ್ಯಗೆ ಕೋಟಿ ಕೋಟಿ ದುಡ್ಡು ಕೊಡ್ತಾರೆ..! ರೈತ ದುಡ್ಡು ಕಟ್ಟದೇ ಹೋದ್ರೆ ಮನೆ ಒಡಿತಾರೆ; ಏನ್ ಸ್ವಾಮಿ ಇದು?

Koppala Farmer Harassment
Highlights

ಬ್ಯಾಂಕ್  ಸಾಲ ಮರು ಪಾವತಿಸದೇ ಇರುವುದಕ್ಕೆ  ರೈತನ ಮನೆಗೆ ಬೀಗ ಮುರಿದು ಲೂಟಿ ಮಾಡಿರುವ ಘಟನೆ ಕಾರಟಗಿ ಪಟ್ಟಣದಲ್ಲಿ ನಡೆದಿದೆ. 

ಕೊಪ್ಪಳ (ಮಾ. 15):  ಬ್ಯಾಂಕ್  ಸಾಲ ಮರು ಪಾವತಿಸದೇ ಇರುವುದಕ್ಕೆ  ರೈತನ ಮನೆಗೆ ಬೀಗ ಮುರಿದು ಲೂಟಿ ಮಾಡಿರುವ ಘಟನೆ ಕಾರಟಗಿ ಪಟ್ಟಣದಲ್ಲಿ ನಡೆದಿದೆ.  ರೈತ ಮನೆಯಲ್ಲಿ ಇಲ್ಲದಿರುವಾಗ ಮನೆ ಬೀಗ ಮುರಿದು ರೈತನ ಮನೆಯಲ್ಲಿದ್ದ ಬಂಗಾರದ ಆಭರಣಗಳನ್ನು  ಬ್ಯಾಂಕ್​​ ಸಿಬ್ಬಂದಿ ಲೂಟಿ ಮಾಡಿದ್ದಾರೆ. 

ಬ್ಯಾಂಕ್​ ಸಿಬ್ಬಂದಿಯ ಹಗಲು ದರೋಡೆಗೆ ರೈತ ವಿಷ್ಣುವರ್ದನ್​ ರೆಡ್ಡಿ ಕಂಗಾಲಾಗಿದ್ದಾರೆ.  ಸುಕೋ ಬ್ಯಾಂಕ್​​’​​ನಲ್ಲಿ ವಿಷ್ನುವರ್ಧನ್ ರೆಡ್ಡಿ  7 ವರ್ಷದ ಹಿಂದೆ 3 ಲಕ್ಷ ರೂ ಸಾಲ ಮಾಡಿದ್ದರು. ಆದರೆ ಸಾಲ ಮರುಪಾವತಿ ಮಾಡಲು ವಿಷ್ಣವರ್ಧನ್ ರೆಡ್ಡಿಗೆ ಆಗಿರಲಿಲ್ಲ. ಇದರಿಂದ  ವಿಷ್ಣುವರ್ಧನರೆಡ್ಡಿ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಬ್ಯಾಂಕಿನವರು ಮನೆ ಬೀಗ ಮುರಿದು ಮನೆಯಲ್ಲಿದ್ದ ಬಂಗಾರದ ಆಭರಣಗಳು ಸಮೇತ ವಸ್ತುಗಳನ್ನು ತೆಗದುಕೊಂಡು ಮನೆಯನ್ನು ಜಪ್ತಿ ಮಾಡಿದ್ದಾರೆ.

ಇದರಿಂದ  ಆಕ್ರೋಶಗೊಂಡ ವಿಷ್ಣುವರ್ಧನರೆಡ್ಡಿ, ನಮ್ಮ ಕುಟುಂಬ ಮನೆಯಲ್ಲಿದ್ದಾಗ ಕೋರ್ಟ್ ಆದೇಶ ತೆಗೆದುಕೊಂಡು ಬಂದು ಮನೆಯನ್ನು ಜಪ್ತಿ ಮಾಡಬಹುದಿತ್ತು. ಆದರೆ ಇದೀಗ ಯಾವುದೇ ಕೊರ್ಟ್ ಆದೇಶ ತರದೇ ನಾನು ಮನೆಯಲ್ಲಿ ಇಲ್ಲದನ್ನು ಗಮನಿಸಿ ಸಾಲಕ್ಕಿಂತ ಹೆಚ್ಚು ಬೆಲೆಬಾಳುವ ಆಭರಣಗಳನ್ನು ಬ್ಯಾಂಕಿನವರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

loader