ಯಾವುದೇ ಧರ್ಮ ಮತ್ತು ಜಾತಿಯವರಿದ್ದರೂ ಸರಿ. ಫೋನ್ ಮತ್ತು ವೆಬ್`ಸೈಟ್ ಮೂಲಕ ಸಂಪರ್ಕಿಸಿ ಅಂತ್ಯಸಂಸ್ಕಾರದ ಸೇವೆ ಪಡೆಯಬಹುದು. ಭಾರತದಂತಹ ವೈವಿಧ್ಯಮಯ ಸಂಸ್ಕೃತಿ, ಭಾಷೆ, ಧರ್ಮ, ನೂರು ಕೋಟಿ ಮೀರಿದ ಜನಸಂಖ್ಯೆ ಇರುವ ಸಮಾಜದಲ್ಲಿ ಇಂಥದ್ದೊಂದು ಸೇವೆ ಅತ್ಯಂತ ಅವಶ್ಯಕವೆಂದು ಯೋಚಿಸಿದ ಸ್ವಾತಿ ರೆಡ್ಡಿ ಈ ಸಂಸ್ಥೆ ಸ್ಥಾಪಿಸಿದ್ದಾರೆ. ಮೊದಮೊದಲು ಈ ಯತ್ನಕ್ಕೆ ಅಷ್ಟಾಗಿ ಬೆಂಬಲ ಸಿಗದಿದ್ದರೂ ಇದೀಗ ಜನಮೆಚ್ಚುಗೆ ಗಳಿಸಿದೆ ಅಂತಾರೆ ಸಂಸ್ಥಾಪಕರು.
ಕೋಲ್ಕತ್ತಾ(ಜ.24): ಸೃಜನಶೀಲತೆಗೆ ಮಿತಿಯೇ ಇಲ್ಲ. ಅದು ಅವರವರ ಬೌದ್ಧಿಕ, ವೈಚಾರಿಕ ಸಾಮರ್ಥ್ಯಕ್ಕೆ ಅನುಗುಣವಾಗಿರುತ್ತದೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಮದುವೆ, ನಿಶ್ಚಿತಾರ್ಥ ಮುಂತಾದ ಕಾರ್ಯಕ್ರಮಗಳಿಗೆ ಇವೆಂಟ್ ಮ್ಯಾನೇಜ್`ಮೆಂಟ್ ಮಾಡುವುದನ್ನ ನೋಡಿದ್ದೀರಿ. ಕೋಲ್ಕತ್ತಾದ ಮಾಜಿ ಸಾಫ್ಟ್`ವೇರ್ ಇಂಜಿನಿಯರ್ ಸ್ವಾತಿ ರೆಡ್ಡಿ ಅಂತ್ಯಸಂಸ್ಕಾರದ ಸೇವೆ ಒದಗಿಸಲು ಅಂಥ್ಯೇಸ್ಟಿ ಫೂನರಲ್ ಸರ್ವೀಸ್ ಎಂಬ ಹೊಸ ಸಂಸ್ಥೆಯನ್ನೇ ತೆರೆದಿದ್ದಾರೆ. ರಿಯಾಯಿತಿ ದರದಲ್ಲಿ ಅಂತ್ಯಸಂಸ್ಕಾರದಿಂದ ತಿಥಿವರೆಗೆ ಎಲ್ಲ ಪ್ರಕ್ರಿಯೆಗಳನ್ನ ಇವರೇ ನಡೆಸಿಕೊಡುತ್ತಾರೆ. ಸಾವಿನಲ್ಲಿ ಸಿಗಬೇಕಾದ ೆಲ್ಲ ರೀತಿಯ ಗೌರವ ಒದಗಿಸಿಕೊಡುತ್ತಾರೆ. ಇದಕ್ಕಾಗಿ 5 ಸದಸ್ಯರ ತಂಡ ಕಟ್ಟಿಕೊಂಡಿದ್ದಾರೆ.