ತನ್ನ ಅನುಮತಿ ಇಲ್ಲದೆ ಹೂವು ಕಿತ್ತಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ವಯೋವೃದ್ಧ ಅತ್ತೆಯನ್ನು ಅಮಾನವೀಯವಾಗಿ ಥಳಿಸಿರುವ ಘಟನೆ ದಕ್ಷಿಣ ಕೊಲ್ಕತ್ತಾದ ಗರಿಯಾ ಪ್ರದೇಶದಲ್ಲಿ ನಡೆದಿದೆ.
ಕೊಲ್ಕತ್ತಾ(ಜೂ.2): ತನ್ನ ಅನುಮತಿ ಇಲ್ಲದೆ ಹೂವು ಕಿತ್ತಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಮಹಿಳೆಯೊಬ್ಬರು ತನ್ನ ವಯೋವೃದ್ಧ ಅತ್ತೆಯನ್ನು ಅಮಾನವೀಯವಾಗಿ ಥಳಿಸಿರುವ ಘಟನೆ ದಕ್ಷಿಣ ಕೊಲ್ಕತ್ತಾದ ಗರಿಯಾ ಪ್ರದೇಶದಲ್ಲಿ ನಡೆದಿದೆ.
ಸ್ವಪ್ನಾಪಾಲ್ ಎಂಬಾಕೆಯೇ ಹಲ್ಲೆ ನಡೆಸಿದ ಮಹಿಳೆ. 75 ವರ್ಷದ ಯಶೋದಾಗೆ ಮರೆವಿನ ಕಾಯಿಲೆ ಇದ್ದು, ಇತ್ತೀಚೆಗೆ ಪತಿ ನಿಧನ ಹೊಂದಿದ ಬಳಿಕ ಪುತ್ರನ ಮನೆಗೆ ಆಗಮಿಸಿದ್ದವರು. ಈ ವೇಳೆ ಗಿಡದಿಂದ ತನ್ನ ಅನುಮತಿ ಕೇಳದೆ ಹೂವು ಕಿತ್ತಿದ್ದಾರೆ ಎಂದು ಸೊಸೆ ಸ್ವಪ್ನಾ ಅತ್ತೆಗೆ ಮನಬಂದಂತೆ ಥಳಿಸಿದ್ದಾರೆ.
ಈ ಘಟನೆಯನ್ನು ನೆರೆ ಮನೆಯವರೊಬ್ಬರು ವಿಡಿಯೋ ಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೋ ವೈರಲ್ ಆಗುತ್ತಿದ್ದಂತೇ ಬನ್ಸ್‌ದ್ರೋನಿ ವ್ಯಾಪ್ತಿಯ ಪೊಲೀಸರು ಸ್ವಪ್ನಾ ಪಾಲ್ ಅವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಳಿಕ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.
