ಕೋಲ್ಕತ್ತಾ(ಮಾ.13): ವಿದ್ಯಾರ್ಥಿಗಳ ವಿರುದ್ಧ ಲೆಸ್ಬಿಯನ್ ಆರೋಪ ಹೊರಿಸಿದ ಶಾಲೆಯ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.

ದಕ್ಷಿಣ ಕೋಲ್ಕತ್ತಾದ ಕಮಲಾ ವಿದ್ಯಾರ್ಥಿನಿಯರ ಶಾಲೆ 10 ವಿದ್ಯಾರ್ಥಿನಿಯರ ವಿರುದ್ಧ ಲೆಸ್ಬಿಯನ್ ಎಂದು ಆರೋಪಿಸಿದ ಕಾರಣ ಆಕ್ರೋಶಗೊಂಡ ಆರೋಪಿತ ವಿದ್ಯಾರ್ಥಿನಿಯರ ಪೋಷಕರು ಶಾಲೆಗೆ ಆಗಮಿಸಿ ಆಡಳಿತ ಮಂಡಳಿ ಸದಸ್ಯರ ವಿರುದ್ಧ ಗದ್ದಲವುಂಟು ಮಾಡಿದರು. ಇದಕ್ಕೆಲ್ಲ ಕಾರಣರಾದ  ಮುಖ್ಯೋಪಾಧ್ಯಾಯಿನಿ ಅವರೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.

10 ವಿದ್ಯಾರ್ಥಿನಿಯರ ವಿರುದ್ಧ  ಕೆಲವು ವಿದ್ಯಾರ್ಥಿಗಳು ಅವರ ನಡವಳಿಕೆಯ ಬಗ್ಗೆ ದೂರು ನೀಡಿದ್ದರು, ಅಲ್ಲದೆ ಇವರ ನಡವಳಿಕೆಯು ವಿಚಿತ್ರವಾಗಿತ್ತು. ಎಂದು ಸಮರ್ಥಿಸಿಕೊಂಡಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಮೈಕೈ ಮುಟ್ಟಿ ಸ್ನೇಹತ್ವದಿಂದ ಮಾತನಾಡಿಸಿದರೆ ಲೆಸ್ಬಿಯನ್ ಹೇಗಾಗುತ್ತಾರೆ' ಎಂದು ವಿದ್ಯಾರ್ಥಿನಿಯರ ಪೋಷಕರು ಪ್ರಶ್ನಿಸಿದ್ದಾರೆ.