ಈ ವೇಳೆ ಆಯೋಜಿಸಿದ್ದ  ಆರ್ಕೆಸ್ಟ್ರಾದಲ್ಲಿ ಹಾಡಲು ಬಂದಿದ್ದ ಹಾಡುಗಾರ್ತಿಯೊಬ್ಬರು,  ಮಾಲಾಶ್ರೀ ಅಭಿನಯದ ನಂಜುಂಡಿ ಕಲ್ಯಾಣದ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ರು. ‘ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು’ ಎಂಬ ಹಾಡಿಗೆ  ಕುಡಿದು ಕುಪ್ಪಳಿಸಿದ್ರು.

ಮದುವೆ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಆರ್ಕೆಸ್ಟ್ರಾದಲ್ಲಿ ಹಾಡುಗಾರ್ತಿ ಮಾಡಿದ ಎಣ್ಣೆ ಡ್ಯಾನ್ಸ್​ ವಿಡಿಯೋ ಸಾಮಾಜಿಕ ಜಾಲದಲ್ಲಿ ವೈರಲ್ ಆಗಿದೆ. ಹತ್ತು ದಿನದ ಹಿಂದೆ ಕೋಲಾರ ನಗರದ ಹೊರ ಹೊಲಯದ ಕೊಂಡರಾಜನಹಳ್ಳಿಯ ಕಲ್ಯಾಣ ಮಂಟಪವೊಂದರಲ್ಲಿ ಮದುವೆ ಸಮಾರಂಭವಿತ್ತು. ಈ ವೇಳೆ ಆಯೋಜಿಸಿದ್ದ ಆರ್ಕೆಸ್ಟ್ರಾದಲ್ಲಿ ಹಾಡಲು ಬಂದಿದ್ದ ಹಾಡುಗಾರ್ತಿಯೊಬ್ಬರು, ಮಾಲಾಶ್ರೀ ಅಭಿನಯದ ನಂಜುಂಡಿ ಕಲ್ಯಾಣದ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ರು. ‘ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು’ ಎಂಬ ಹಾಡಿಗೆ ಕುಡಿದು ಕುಪ್ಪಳಿಸಿದ್ರು. ಕೈಯಲ್ಲಿ ಬಿಯರ್ ಬಾಟಲ್​ ಹಿಡಿದು, ಓಲಾಡುತ್ತಾ, ತೂರಾಡುತ್ತಾ ಹೆಜ್ಜೆ ಹಾಕಿದ್ದಳು.

ಈಕೆಯ ಡ್ಯಾನ್ಸ್​ ಅನ್ನು ಮೊಬೈಲ್‌ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡಲಾಗಿದ್ದು, ಈ ವಿಡಿಯೋ ವೈರಲ್ ಆಗಿದೆ.