ನಿನ್ನೆ ಒಂದೇ ದಿನ ಮೂರು ಹಸುಗೂಸು ಮೃತಪಟ್ಟಿವೆ. ಘಟನೆಯ ಬಗ್ಗೆ ಆಸ್ಪತ್ರೆಯಲ್ಲಿರುವ ಬಾಣಂತಿಯರು ಹಾಗೂ ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಆಸ್ಪತ್ರೆಯ ವೈದ್ಯರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ(ಆ.22): ಕಳೆದ ಕೆಲ ದಿನಗಳ ದಿನಗಳಿಂದ ಉತ್ತರಪ್ರದೇಶದ ಗೋರಖ್'ಪುರದ ಆಸ್ಪತ್ರೆಯ ಸರಣಿ ಶಿಶುಗಳ ಸಾವಿನ ಘಟನೆ ಮಾಸುವ ಮುನ್ನವೆ ಅಂತಹದ್ದೇ ಘಟನೆ ನಮ್ಮ ರಾಜ್ಯದ ಕೋಲಾರದಲ್ಲೂ ನಡೆದಿದೆ.
ಕೋಲಾರ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಕಳೆದ 15 ದಿನಗಳಿಂದ ತೀವ್ರ ಗಿಗಾ ಘಟಕದಲ್ಲಿ ದಾಖಲಾಗಿದ್ದ 10ಕ್ಕೂ ಹೆಚ್ಚು ನವಜಾತ ಶಿಶುಗಳು ಸಾವನ್ನಪ್ಪಿವೆ. ನಿನ್ನೆ ಒಂದೇ ದಿನ ಮೂರು ಹಸುಗೂಸು ಮೃತಪಟ್ಟಿವೆ. ಘಟನೆಯ ಬಗ್ಗೆ ಆಸ್ಪತ್ರೆಯಲ್ಲಿರುವ ಬಾಣಂತಿಯರು ಹಾಗೂ ಮಕ್ಕಳ ಪೋಷಕರು ಆತಂಕ ವ್ಯಕ್ತಪಡಿಸಿದ್ದು, ಆಸ್ಪತ್ರೆಯ ವೈದ್ಯರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಆಸ್ಪತ್ರೆಗೆ ಕಳಂಕ ತರಬೇಡಿ
ಆಸ್ಪತ್ರೆ ಮೇಲ್ವಿಚಾರಕರಾದ ಡಾ. ಶಿವಕುಮಾರ್ ಮಕ್ಕಳ ಸಾವಿನ ಬಗ್ಗೆ ಮಾತನಾಡಿ, ಮಕ್ಕಳ ಸಾವಿಗೆ ಕಾರಣ ತಿಳಿಸಲು ಸಿದ್ಧರಿದ್ದೇವೆ. ನಮ್ಮಲ್ಲಿ ವೈದ್ಯರು 24 ಗಂಟೆವರೆಗೂ ಕಾರ್ಯ ನಿರ್ವಹಿಸುತ್ತಿದ್ದಾರೆ. ವೈದ್ಯರ ಮೇಲೆ ಇಲ್ಲ ಸಲ್ಲದ ಆರೋಪ ಮಾಡಬಾರದು. ಅಸಹಜ ಸಾವು ಆದರೂ ವೈದ್ಯರನ್ನು ಕೆಟ್ಟದಾಗಿ ನೋಡಬೇಡಿ. ಚಿಕಿತ್ಸೆ ಬಗ್ಗೆ ಬೇರೆ ರೋಗಿಗಳನ್ನು ಕೇಳಿ ಮಾಹಿತಿ ಪಡೆಯಿರಿ. ನಮ್ಮ ಆಸ್ಪತ್ರೆಯಲ್ಲಿ ಉತ್ತಮವಾದ ಚಿಕಿತ್ಸೆಯನ್ನೇ ನೀಡುತ್ತಿದ್ದೇವೆ. ನಮ್ಮ ಆಸ್ಪತ್ರೆಗೆ ಕಳಂಕ ತರುವ ಕೆಲಸ ಮಾಡಬಾರದು. ಸಾಕಷ್ಟು ಮಕ್ಕಳು ಬದುಕಿ ಮನೆಗೆ ಹೋಗುತ್ತಿದ್ದಾರೆ. ಸರಿಯಾದ ಅಂಕಿ ಅಂಶಗಳು ನಿಮಗೆ ತಿಳಿದಿಲ್ಲ.ಎಷ್ಟು ಮಕ್ಕಳ ಸಾವು ಆಯಿತು ಅನ್ನುವುದು ಮುಖ್ಯವಲ್ಲ.ಎಷ್ಟು ಹೆರಿಗೆಯಿಂದ ಮಕ್ಕಳು ಸಾವು ಆಗಿದೆ ಅನ್ನುವುದು ಮುಖ್ಯ' ಎಂದು ತಿಳಿಸಿದ್ದಾರೆ.
