ಚಲನಚಿತ್ರ ನಟ ಅಚ್ಯುತ್ ಕುಮಾರ್ ನಿರ್ದೇಶನದ, "ಥಿಯೇಟರ್ ತತ್ಕಾಲ್" ಅರ್ಪಿಸುವ ನಾಟಕ "ಕೊಳ" ರಂಗ ಶಂಕರದಲ್ಲಿ ಆಗಸ್ಟ್ 20, 2017 ರಂದು ಮದ್ಯಾಹ್ನ 3-30 ಹಾಗೂ ಸಂಜೆ 7-30 ಕ್ಕೆ ಪ್ರದರ್ಶನಗೊಳ್ಳಲಿದೆ.

ಬೆಂಗಳೂರು (ಆ.18): ಚಲನಚಿತ್ರ ನಟ ಅಚ್ಯುತ್ ಕುಮಾರ್ ನಿರ್ದೇಶನದ, "ಥಿಯೇಟರ್ ತತ್ಕಾಲ್" ಅರ್ಪಿಸುವ ನಾಟಕ "ಕೊಳ" ರಂಗ ಶಂಕರದಲ್ಲಿ ಆಗಸ್ಟ್ 20, 2017 ರಂದು ಮದ್ಯಾಹ್ನ 3-30 ಹಾಗೂ ಸಂಜೆ 7-30 ಕ್ಕೆ ಪ್ರದರ್ಶನಗೊಳ್ಳಲಿದೆ.
"ಕೊಳ" ನಾಟಕವು 'ಮಹೇಶ್ ಎಲ್ಕುಂಚ್ವಾರ್' ಅವರ 'ವಾಡೆ ತ್ರಿವಳಿಯಲ್ಲೊಂದಾದ' "ಮಗ್ನಾ ತಾಳ್ಯಾಕಾಟಿ" ಎಂಬ ಮರಾಠಿ ನಾಟಕದ ಕನ್ನಡಾನುವಾದ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ನಂದಿನಿ. ಕೆ. ಆರ್. ಮತ್ತು ಪ್ರಶಾಂತ್ ಹಿರೇಮಠ್. ಮುರಿದು ಹೋಗಿರುವ ಸಂಬಂಧಗಳು, ಚೆದುರಿ ಹೋಗುತ್ತಿರುವ ವಾಡೆಯನ್ನು ಬಿಂಬಿಸುವ ಈ ನಾಟಕ ಪಾತ್ರಗಳ ಅಸ್ತಿತ್ವ ಮತ್ತು ನೆಲೆಗಟ್ಟುಗಳನ್ನು ಪ್ರಶ್ನಿಸುತ್ತದೆ.
ಪಾತ್ರವರ್ಗ: ಶೈಲಶ್ರೀ ಧರ್ಮೇಂದ್ರ, ನಿವೇದಿತ, ಕಿರಣ್ ನಾಯಕ್, ಅಪೇಕ್ಷ ಘಳಗಿ, ಶ್ರುಂಗ, ನಂದಿನಿ ಪಟವರ್ಧನ್, ಶಿವಪ್ರಸಾದ್, ಕಾಳಿಪ್ರಸಾದ್, ಶಾರದಾ ಜಾದೂಗಾರ್, ನರೇಶ್ ಮಯ್ಯ, ತೇಜು ಬೆಳವಾಡಿ.
ಟಿಕೇಟುಗಳಿಗಾಗಿ ಸಂಪರ್ಕಿಸಿ: +919901234161 ಅಥವಾ BookMyShow ನಲ್ಲಿ ಕಾಯ್ದಿರಿಸಬಹುದು.