ಇತ್ತೀಚೆಗೆ ಬಿಡುಗಡೆಯಾದ ಡ್ಯಾನಿಶ್ ಸೇಠ್ ಅಭಿನಯದ ‘ಹಂಬಲ್ ಪೊಲಿಟಿಷಿಯನ್ ನೋಗರಾಜ್’ ಚಿತ್ರದ ಟ್ರೇಲರ್ ಅನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೆಚ್ಚಿ ಶುಭ ಹಾರೈಸಿದ್ದಾರೆ. ಈ ಮೂಲಕ ಭಾರತ ಕ್ರಿಕೆಟ್ ತಂಡದ ಕಪ್ತಾನನೊಬ್ಬ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಟ್ರೇಲರ್'ಅನ್ನು ಮೆಚ್ಚಿದಂತಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ಡ್ಯಾನಿಶ್ ಸೇಠ್ ಅಭಿನಯದ ‘ಹಂಬಲ್ ಪೊಲಿಟಿಷಿಯನ್ ನೋಗರಾಜ್’ ಚಿತ್ರದ ಟ್ರೇಲರ್ ಅನ್ನು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮೆಚ್ಚಿ ಶುಭ ಹಾರೈಸಿದ್ದಾರೆ. ಈ ಮೂಲಕ ಭಾರತ ಕ್ರಿಕೆಟ್ ತಂಡದ ಕಪ್ತಾನನೊಬ್ಬ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದ ಟ್ರೇಲರ್'ಅನ್ನು ಮೆಚ್ಚಿದಂತಾಗಿದೆ.

ನಟ ರಕ್ಷಿತ್ ಶೆಟ್ಟಿ, ನಿರ್ದೇಶಕ ಹೇಮಂತ್ ರಾವ್ ಹಾಗೂ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ‘ಹಂಬಲ್ ಪೊಲಿಟಿಷಿಯನ್ ನೋಗರಾಜ್’ ಚಿತ್ರದ ಟ್ರೇಲರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈಗ ಕೊಹ್ಲಿ ಈ ಟ್ರೇಲರ್ ಮೆಚ್ಚಿ ವೀಡಿಯೋ ಮೂಲಕ ಡ್ಯಾನಿಶ್ ಸೇಠ್ಗೆ ಶುಭ ಹಾರೈಸಿದ್ದಾರೆ.

‘ನಮಸ್ಕಾರ, ಡ್ಯಾನಿಷ್ ಸೇಠ್ ಅಭಿನಯಿಸಿರುವ ‘ಹಂಬಲ್ ಪೊಲಿಟಿಷಿಯನ್ ನೋಗರಾಜ್’ ಚಿತ್ರದ ಟ್ರೇಲರ್ಗೆ ಎಲ್ಲಾ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ನನಗೂ ಕೂಡ ಈ ಟ್ರೇಲರ್ ಇಷ್ಟವಾಗಿದೆ. ತುಂಬಾ ಖುಷಿ ಆಗುತ್ತಿದೆ. ಚಿತ್ರ ಸಕ್ಸಸ್ ಕಾಣಲಿ. ಡ್ಯಾನಿಶ್ ನಗಿಸುವುದನ್ನು ಮುಂದುವರೆಸು’ ಎಂದು ಕೊಹ್ಲಿ ವೀಡಿಯೋ ಮೂಲಕ ಮಾತನಾಡಿದ್ದಾರೆ. ಅದನ್ನು ಚಿತ್ರತಂಡಕ್ಕೆ ಕಳುಹಿಸಿ ಚಿತ್ರಕ್ಕೆ ಶುಭಾಶಯ ಕೋರಿದ್ದಾರೆ.

Scroll to load tweet…

ಇದಕ್ಕೆ ಕಾರಣ ಡ್ಯಾನಿಶ್ ಹಾಗೂ ಕೊಹ್ಲಿ ನಡುವಿನ ಗೆಳೆತನ. ‘ಐಪಿಎಲ್ ಕ್ರಿಕೆಟ್ ಮ್ಯಾಚ್ ಸಂದರ್ಭದಲ್ಲಿ ನಾನು ಆರ್ ಸಿಬಿ ತಂಡದ ಜೊತೆಗಿದ್ದೆ. ಆ ಸಮಯದಲ್ಲಿ ನಾನು ಮತ್ತು ಕೊಹ್ಲಿ ಇಬ್ಬರು ಗೆಳೆಯರಾಗಿದ್ದೆವು. ಆ ನಂಟು ಈಗಲೂ ಇದೆ. ಗೆಳೆತನದ ಕಾರಣಕ್ಕೆ ಅವರೇ ಚಿತ್ರದ ಟ್ರೇಲರ್ ನೋಡಿ ವೀಡಿಯೋ ಕಳುಹಿಸಿದ್ದಾರೆ. ಮೆಚ್ಚುಗೆಯ ಮಾತನಾಡಿ, ಚಿತ್ರಕ್ಕೆ ಶುಭಾಶಯ ಕೋರಿದ್ದಾರೆ. ಇದು ನನಗೆ ತುಂಬಾನೆ ಖುಷಿ ತಂದಿದೆ’ ಎನ್ನುತ್ತಾರೆ ನಟ ಡ್ಯಾನಿಶ್ ಸೇಠ್. ಐಪಿಎಲ್ ಕ್ರಿಕೆಟ್ ಪಂದ್ಯಾಟ ಸಂದ‘ರ್ದಲ್ಲಿ ಡ್ಯಾನಿಶ್ ಸೇಠ್ ಆರ್ಸಿಬಿ ತಂಡದ ಸದಸ್ಯರನ್ನು ಕಾಲೆಳೆಯುತ್ತಾ ತಮಾಷೆ ಮಾಡುತ್ತಿದ್ದುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

ಬೇರೆ ಚಿತ್ರರಂಗದಿಂದಲೂ ಶುಭ ಹಾರೈಕೆ: ಟಾಲಿವುಡ್ ನಟಿ ರಾಕುಲ್ ಪ್ರೀತಿ ಸಿಂಗ್, ಮಲಯಾಳಂ ನಟ ನಿವಿನ್ ಪೌಲಿ, ಬಾಹುಬಲಿ ಖ್ಯಾತಿಯ ರಾಣಾ ದಗ್ಗು ಬಾಟಿ, ಕಾಲಿವುಡ್ ನಟ ಅರವಿಂದ್ ಸ್ವಾಮಿ ಸೇರಿದಂತೆ ಹಲವು ಜನಪ್ರಿಯ ನಟ-ನಟಿಯರು ಈ ಚಿತ್ರ ಟ್ರೇಲರ್ ಮೆಚ್ಚಿಕೊಂಡು ಮಾತನಾಡಿದ್ದಾರೆ. ಟ್ರೇಲರ್ ಬಿಡುಗಡೆಯಾದ 24 ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ಹಿಟ್ಸ್ ದಾಖಲಿಸಿತ್ತು. ಈಗ ಅದರ ಸಂಖ್ಯೆ ನಾಲ್ಕೂವರೆ ಲಕ್ಷ ದಾಟಿದೆ.