ವಿರಾಟ್ ಈ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದರು. ಈ ವರ್ಷದಲ್ಲಿ ಏಕದಿನದಲ್ಲಿ 1000 ರನ್ ಪೂರೈಸಿದ ಮೊದಲ ಆಟಗಾರ ಎನಿಸಿಕೊಂಡರು.

ನಾಯಕ ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ 2 ವಿಶ್ವ ದಾಖಲೆ ಬರೆದಿದ್ದಾರೆ. ಕಳೆದ ಪಂದ್ಯದಲ್ಲಿ ಸನತ್ ಜಯಸೂರ್ಯ ದಾಖಲೆ ಮುರಿದಿದ್ದ ವಿರಾಟ್ ಈ ಪಂದ್ಯದಲ್ಲಿ ರಿಕಿ ಪಾಂಟಿಂಗ್‌ರ 30 ಶತಕಗಳ ದಾಖಲೆ ಸರಿಗಟ್ಟಿದರು. ಕೇವಲ 194 ಪಂದ್ಯಗಳಲ್ಲಿ 30 ಶತಕ ಬಾರಿಸುವ ಮೂಲಕ ವಿರಾಟ್ ಹೊಸ ದಾಖಲೆ ಬರೆದಿದ್ದಾರೆ. ಗರಿಷ್ಠ ಪಟ್ಟಿಯಲ್ಲಿ ಸದ್ಯ ಜಂಟಿ 2ನೇ ಸ್ಥಾನಕ್ಕೇರಿರುವ ವಿರಾಟ್, ಸಚಿನ್ ತೆಂಡುಲ್ಕರ್‌ರ 49 ಶತಕಗಳ ದಾಖಲೆ ಮೇಲೆ ಕಣ್ಣಿಟ್ಟಿದ್ದಾರೆ.

ಈ ವರ್ಷ 1 ಸಾವಿರ ರನ್

ವಿರಾಟ್ ಈ ಪಂದ್ಯದಲ್ಲಿ ಮತ್ತೊಂದು ದಾಖಲೆ ಬರೆದರು. ಈ ವರ್ಷದಲ್ಲಿ ಏಕದಿನದಲ್ಲಿ 1000 ರನ್ ಪೂರೈಸಿದ ಮೊದಲ ಆಟಗಾರ ಎನಿಸಿಕೊಂಡರು. 2017ರಲ್ಲಿ 18 ಏಕದಿನಗಳನ್ನು ಆಡಿರುವ ಕೊಹ್ಲಿ, 92.45ರ ಸರಾಸರಿಯಲ್ಲಿ ಒಟ್ಟು 1017 ರನ್ ಕಲೆಹಾಕಿದ್ದಾರೆ. 4 ಶತಕ ಹಾಗೂ 6 ಅರ್ಧಶತಕ ದಾಖಲಿಸಿದ್ದಾರೆ. ತಮ್ಮ ವೃತ್ತಿಬದುಕಿನಲ್ಲಿ 5ನೇ ಬಾರಿಗೆ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಈ ವರ್ಷಾಂತ್ಯದ ವೇಳೆಗೆ ಭಾರತ ಇನ್ನೂ 13 ಏಕದಿನ ಪಂದ್ಯಗಳನ್ನು ಆಡಲಿದೆ.