Asianet Suvarna News Asianet Suvarna News

ಬ್ರಾಹ್ಮಣರಿಗೆ ಜ್ಞಾನವೇ ಆಸ್ತಿ

ಬ್ರಾಹ್ಮಣ ಸಮುದಾಯ ಜ್ಞಾನವೇ ಬಹುದೊಡ್ಡ ಆಸ್ತಿಯಾಗಿ ಕೈಹಿಡಿದು ಮುನ್ನಡೆಸಿದೆ. ಬ್ರಾಹ್ಮಣ ಸಮುದಾಯ ಪರೋಪಕಾರಕ್ಕೆ ಹೆಸರಾಗಿದ್ದು, ಲೋಕಕಲ್ಯಾಣ ಕಾರ್ಯಗಳನ್ನು ಮಾಡುತ್ತಾ ಸಮಾಜವನ್ನು ಮುನ್ನಡೆಸುತ್ತಾ ಬಂದಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ನಿವೃತ್ತ ಐಎಎಸ್ ಅಧಿಕಾರಿ  ಡಾ.ಎಸ್.ಸುಬ್ರಹ್ಮಣ್ಯ ಹೇಳಿದ್ದಾರೆ. 

Knowledge Is The asset Of Brahmins
Author
Bengaluru, First Published Jul 23, 2018, 9:50 AM IST

ಚಿಕ್ಕಬಳ್ಳಾಪುರ: ಸಕಲ ಜೀವರಾಶಿಗೂ ಒಳಿತನ್ನೇ ಬಯಸುತ್ತಾ ಆಚಾರ್ಯ ಸ್ಥಾನದಲ್ಲಿರುವ ಬ್ರಾಹ್ಮಣ ಸಮುದಾಯ ಜ್ಞಾನವೇ ಬಹುದೊಡ್ಡ ಆಸ್ತಿಯಾಗಿ ಕೈಹಿಡಿದು ಮುನ್ನಡೆಸಿ ದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ನಿವೃತ್ತ ಐಎಎಸ್ ಅಧಿಕಾರಿ  ಡಾ.ಎಸ್.ಸುಬ್ರಹ್ಮಣ್ಯ ಆಭಿಪ್ರಾಯಪಟ್ಟರು.

 ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ಭಾನುವಾರ ಜಿಲ್ಲಾ ಬ್ರಾಹ್ಮಣರ ಸಂಘ ಮತ್ತು ಜಿಲ್ಲಾ ಬ್ರಾಹ್ಮಣ ನೌಕರರ ಸೇವಾ ಸಂಘ ಏರ್ಪಡಿಸಿದ್ದ ಸಾಧಕರಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸನ್ಮಾನಿತರಾಗಿ ಮಾತನಾಡಿದ ಅವರು, ಬ್ರಾಹ್ಮಣ ಸಮುದಾಯ ಪರೋಪಕಾರಕ್ಕೆ ಹೆಸರಾಗಿದ್ದು, ಲೋಕಕಲ್ಯಾಣ ಕಾರ್ಯಗಳನ್ನು ಮಾಡುತ್ತಾ ಸಮಾಜವನ್ನು ಮುನ್ನಡೆಸುತ್ತಾ ಬಂದಿದೆ ಎಂದರು. 

ದೇಶದ ಯಾವುದೇ ಭಾಗದ ಊರಿನ, ಯಾವುದೇ ಬ್ರಾಹ್ಮಣ ಎಂದೂ ಊರೊಟ್ಟಿಗೆ ಜಗಳ ಕಾಯಲಿಲ್ಲ. ಬೇರೆಯವರ ತಂಟೆಗೆ ಹೋಗಲಿಲ್ಲ. ತಾನಾಯಿತು ತನ್ನ ನೇಮ ವೃತ ಪೂಜೆ ಪುನಸ್ಕಾರವಾಯಿತು ಎಂದು ಬದುಕಿದವರು. ಕಾಲ ಬದಲಾದಂತೆ ಉಳುವವನೇ ಭೂಮಿಯ ಒಡೆಯ ಎನ್ನುವ ಕಾನೂನು ಜಾರಿಯಾದಾಗ ಅದರ ಬಲಿಪಶುಗಳಲ್ಲಿ ಹೆಚ್ಚಿನವರು ಬ್ರಾಹ್ಮಣರೇ ಆಗಿದ್ದಾರೆ. 

ಆದರೆ ಇದರಿಂದ ತೊಂದರೆ ಅನುಭವಿಸಿದರೂ ಅಳುಕದೆ ಬದುಕು ಕಟ್ಟಿಕೊಳ್ಳು ವ ಮೂಲಕ ಇಂದು ಬಹುದೊಡ್ಡ ಉದ್ಯಮಪತಿಗಳಾಗಲು ಅಂದಿನ ಅತಂತ್ರ ಬದುಕೇ ಕಾರಣವಾಯಿತು ಎಂದರು. ಸರ್ಕಾರ ಸಮುದಾಯದ ಏಳಿಗೆಗಾಗಿ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಶ್ಲಾಘನೀಯ, ಇದರಿಂದಾಗಿ ಸಮುದಾಯದ ಅಭಿವೃದ್ಧಿ ಸಾಧ್ಯವಾಗುತ್ತಿದ್ದು, ಸಂಘಟನೆಯ ಮುಖಂಡರು ನಮ್ಮಲ್ಲಿ ಯಾರು ಆಶಕ್ತರಿದ್ದಾರೋ ಯಾರಿಗೆ ನಿಜವಾಗಲೂ ಸಹಾಯ ಬೇಕಿದೆಯೋ ಅಂತಹವರನ್ನು ಗುರ್ತಿಸಿ ಸಹಾಯಕ್ಕೆ ಮುಂದಾಗುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.

Follow Us:
Download App:
  • android
  • ios