ಗ್ರೀನ್ ಕಾರ್ಡ್‌ಗೆ ಯತ್ನಿಸುತ್ತಿರುವ ಪಾಟೀಲ್ ಪತ್ನಿ ಹಿನ್ನೆಲೆ ಏನು?

First Published 24, Mar 2018, 4:34 PM IST
know more about M B Patil wife Asha Patil
Highlights

ಪ್ರತ್ಯೇಕ ಲಿಂಗಾಯತ ಧರ್ಮ ಹಾಗೂ ಮಹದಾಯಿ ಹೋರಾಟದಿಂದ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಎಂ.ಬಿ.ಪಾಟೀಲ್ ಪತ್ನಿ ವಿದೇಶಕ್ಕೆ ಹೋಗಿ ನೆಲೆಸಲು ಯತ್ನಿಸುತ್ತಿದ್ದಾರೆಂಬ ಸುದ್ದಿ ಇದೀಗ ಬಹಿರಂಗಗೊಂಡಿದೆ. ಈ ಬೆನ್ನಲ್ಲೇ ಪಾಟೀಲ್ ಪತ್ನಿ ಆಶಾ ಪಾಟೀಲ್ ಬಗ್ಗೆಯೂ ಕುತೂಹಲ ಹೆಚ್ಚಿದ್ದು, ಇವರ ಬಗ್ಗೆ ಇಲ್ಲಿದೆ ಮಾಹಿತಿ.

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ಹಾಗೂ ಮಹದಾಯಿ ಹೋರಾಟದಿಂದ ಇತ್ತೀಚೆಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿರುವ ಎಂ.ಬಿ.ಪಾಟೀಲ್ ಪತ್ನಿ ವಿದೇಶಕ್ಕೆ ಹೋಗಿ ನೆಲೆಸಲು ಯತ್ನಿಸುತ್ತಿದ್ದಾರೆಂಬ ಸುದ್ದಿ ಇದೀಗ ಬಹಿರಂಗಗೊಂಡಿದೆ. ಈ ಬೆನ್ನಲ್ಲೇ ಪಾಟೀಲ್ ಪತ್ನಿ ಆಶಾ ಪಾಟೀಲ್ ಬಗ್ಗೆಯೂ ಕುತೂಹಲ ಹೆಚ್ಚಿದ್ದು, ಇವರ ಬಗ್ಗೆ ಇಲ್ಲಿದೆ ಮಾಹಿತಿ.

ವನ್ಯಜೀವಿ ಪ್ರಿಯೆ ಆಶಾ ಪಾಟೀಲ್ ಮೂಲತಃ ವಿಜಯಪುರದವರಾಗಿದ್ದು, ಇದೀಗ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ವಿಜಯಪುರಕ್ಕೂ ಹಾಗೂ ಪತಿ ಕ್ಷೇತ್ರ ಬಬಲೇಶ್ವರಕ್ಕೂ ಆಗಾಗ ಹೋಗಿಬರುತ್ತಾರೆ. ಬಬಲೇಶ್ವರದ ಮಹಿಳೆಯರೊಂದಿಗೆ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ.

ಬಿಎಸ್ಸಿ ಪದವೀಧರೆಯಾಗಿರುವ ಇವರು ಮಕ್ಕಳ ತಜ್ಞ ಸಿ.ಆರ್.ಬಿದರಿ ಅವರ ಪುತ್ರಿ. ಇವರಿಗೆ ಇಬ್ಬರು ಪುತ್ರರಿದ್ದಾರೆ. ಎಂ.ಬಿ.ಪಾಟೀಲ್ ಫೌಂಡೇಷನ್‌ನ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. 

ಅಧ್ಯಾತ್ಮದ ಬಗ್ಗೆಯೂ ಆಸಕ್ತಿ ಇರುವ ಆಶಾ, ಧಾರ್ಮಿಕ ಸಂಸ್ಥೆ, ಆಶ್ರಮಗಳಿಗೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಪ್ರಾಣಿಗಳು ಅದರಲ್ಲಿಯೂ ವನ್ಯ ಜೀವಿಗಳ ಬಗ್ಗೆ ಅಪಾರ ಪ್ರೀತಿ ಹೊಂದಿರುವ ಇವರು, ತಮ್ಮ ಮನೆಯಲ್ಲಿ ವಿದೇಶಿ ತಳಿ ನಾಯಿಗಳನ್ನು ಸಾಕಿಕೊಂಡಿದ್ದಾರೆ.  ಅಲ್ಲದೇ ಮೈಸೂರು ಮೃಗಾಲಯದಲ್ಲಿ ತಮ್ಮ ಚಿಕ್ಕ ಮಗನ ಹೆಸರಿನಲ್ಲಿ ಆನೆ ಮರಿಯೊಂದನ್ನು ದತ್ತು ಪಡೆದಿದ್ದಾರೆ.

ಫ್ಯಾಷನ್ ಜಗತ್ತಿನೊಡನೆಯೂ ನಂಟಿರುವ ಆಶಾಗೆ ಚಿತ್ರನಟಿಯರಿಗೂ ಉತ್ತಮ ಸಂಪರ್ಕವಿದೆ.

loader