ರಾಜ್ಯ ರಾಜಕಾರಣದಲ್ಲಿಯೇ ಬಿರುಗಾಳಿ ಎಬ್ಬಿಸಲಿರುವ ಸುದ್ದಿಯೊಂದನ್ನು ಸುವರ್ಣ ನ್ಯೂಸ್ ಬ್ರೇಕ್ ಮಾಡಿದೆ.

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿಯೇ ಬಿರುಗಾಳಿ ಎಬ್ಬಿಸಲಿರುವ ಸುದ್ದಿಯೊಂದನ್ನು ಸುವರ್ಣ ನ್ಯೂಸ್ ಬ್ರೇಕ್ ಮಾಡಿದೆ.

ಲಿಂಗಾಯತ ಧರ್ಮದ ಮುಂಚೂಣಿ ಹೋರಾಟಗಾರ, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಪತ್ನಿ ಆಶಾ ಪಾಟೀಲ್ ಅಮೆರಿಕ ಗ್ರೀನ್ ಕಾರ್ಡ್​ ಪಡೆಯಲು ಯತ್ನಿಸುತ್ತಿರುವುದು ಸುವರ್ಣ ನ್ಯೂಸ್‌ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿದೆ.

ವಿದೇಶದಲ್ಲಿಯೇ ನೆಲೆಸಲು ಶಕ್ತಿ ಮೀರಿ ಆಗರ್ಭ ಶ್ರೀಮಂತ ಪಾಟೀಲ್ ಕುಟುಂಬ ಯತ್ನಿಸುತ್ತಿದ್ದು, ಈ ನಡೆ ಆಶ್ಚರ್ಯ ತಂದಿದೆ. 

ಒಂದೆಡೆ ರಾಜ್ಯಕ್ಕೆ ಬಂಡವಾಳ ಹರಿದು ಬರಲಿ, ಎಂದು ಕಾಂಗ್ರೆಸ್ ಸರಕಾರ ಯತ್ನಿಸುತ್ತಿದ್ದರೆ, ಪಾಟೀಲ್ ಕುಟುಂಬ ವಿದೇಶದಲ್ಲಿ ಬಂಡವಾಳ ಹೂಡಲು ಆಸಕ್ತವಾಗಿದೆ. ಅಮೆರಿಕದಲ್ಲಿ ಕನಿಷ್ಠ 10 ಜನರಿಗೆ ಪೂರ್ಣ ಪ್ರಮಾಣದ ಉದ್ಯೋಗ ಕೊಟ್ಟರೆ, ಗ್ರೀನ್ ಕಾರ್ಡ್ ಸಿಗಲಿದ್ದು, ಅಲ್ಲಿಯೇ ಶಾಶ್ವತವಾಗಿ ನೆಲೆಸಲು ಅವಕಾಶ ಸಿಗಲಿದೆ. ಅದಕ್ಕೆ ಅಲ್ಲಿ 3.35 ಕೋಟಿ ರೂಪಾಯಿ ಪ್ರಾರಂಭಿಕ ಹಣ ಹೂಡಲೂ ಪಾಟೀಲ್ ಕುಟುಂಬ ಸಿದ್ಧವಿದೆ. 

ಈಗಾಗಲೇ ಗ್ರೀನ್ ಕಾರ್ಡ್ ಕೊಡಿಸುವ ವಿದೇಶಿ ಕಂಪನಿಗೆ 33 ಲಕ್ಷ 50 ಸಾವಿರ ರೂಪಾಯಿ ಕೊಟ್ಟಿದ್ದಾರೆ ಪಾಟೀಲ್ ಪತ್ನಿ. ಪರವಾನಗಿ ಕಲ್ಪಿಸುವ ಮತ್ತೊಂದು ಕಂಪನಿಗೆ 10 ಲಕ್ಷ ರೂಪಾಯಿ​​​​​ ಸಂದಾಯ ಮಾಡಿರುವುದೂ ಪತ್ತೆಯಾಗಿದೆ. 

ನನ್ನ ಮೇಲೆ ಐಟಿ ದಾಳಿ ನಡೆಯುತ್ತೆ ಅಂತ ಪದೇ ಪದೇ ಹೇಳುತ್ತಿದ್ದಾರೆ ಪಾಟೀಲ್, ಗ್ರೀನ್ ಕಾರ್ಡ್​​​ಗೆ ಹಾಕಿರುವ ಅರ್ಜಿಗೂ ದಾಳಿ ನಡೆಯುವ ಭೀತಿಗೂ ಇದೆಯಾ ಲಿಂಕ್​​ ಎಂಬುವುದ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.