Asianet Suvarna News Asianet Suvarna News

10 ರೂ.ದಿಂದ 15 ಲಕ್ಷದವರೆಗೆ ಸಹಾಯ ಮಾಡಿ: ಈ ವೆಬ್‌ಸೈಟ್‌ಗೆ ಭೇಟಿ ನೀಡಿ!

ಸಭ್ಯ ನಾಗರಿಕ ಸಮಾಜದಲ್ಲಿ ಇದೆಂತಾ ಖದೀಮರ ಹಾವಳಿ?| ಸೈನಿಕ ಸಾವನ್ನೇ ದಂಧೆಯನ್ನಾಗಿ ಮಾಡಿಕೊಂಡ ದುರುಳರು| ಹುತಾತ್ಮರ ಕುಟುಂಬಕ್ಕೆ ನೆರವಿನ ಸೋಗು| ಹಣ ಪೀಕಲು ಶುರು ಮಾಡಿದ್ದಾರೆ ನಾಚಿಕೆ ಇಲ್ಲದ ಖದೀಮರು| ಸೈನಿಕರ ಕುಟುಂಬಕ್ಕೆ ನೆರವು ನೀಡಲು ನಿವೇನು ಮಾಡಬೇಕು?| 

Know how to donate brave hearts through government website
Author
Bengaluru, First Published Feb 16, 2019, 11:30 AM IST

ಬೆಂಗಳೂರು(ಫೆ.16): ಪತ್ರಕರ್ತನಾದವನಿಗೆ ಇದು ನಿಜಕ್ಕೂ ಸಂದಿಗ್ಧ ಪರಿಸ್ಥಿತಿ. ಒಂದು ಕಡೆ ಹುತಾತ್ಮ ಯೋಧರ ಕುಟುಂಬಸ್ಥರ ನೆರವಿಗೆ ಸಾಗರದಂತೆ ಹರಿದು ಬರುತ್ತಿರುವ ಜನಸಾಗರ, ಮತ್ತೊಂದೆಡೆ ಯೋಧರ ಸಾವನ್ನೇ ದಂಧೆಯನ್ನಾಗಿ ಮಾಡಿಕೊಂಡಿರುವ ದುರುಳರ ಕುರಿತು ಎಚ್ಚರಿಸುವ ಅನಿವಾರ್ಯತೆ.

ಹೌದು, ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಕ್ಕೆ ಇಡೀ ದೇಶದಿಂದ ನೆರವಿನ ಮಹಾಪೂರ ಹರಿದು ಬರುತ್ತಿದೆ. ಜನ ಸ್ವಯಂಪ್ರೇರಣೆಯಿಂದ ಹುತಾತ್ಮ ಯೋಧರ ಕುಟುಂಬಕ್ಕೆ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದಾರೆ.

ಆದರೆ ಇದೇ ಸಭ್ಯ ಮಾನವ ಸಮಾಜದಲ್ಲಿ ಮನುಷ್ಯತ್ವ ಇಲ್ಲದೇ ಬದುಕುತ್ತಿರುವ ಕೆಲವರು, ಯೋಧರ ಸಾವನ್ನೇ ದಂಧಧೆಯನ್ನಾಗಿ ಮಾಡಿಕೊಂಡಿದ್ದಾರೆ. ನಕಲಿ ಗುಂಪುಗಳನ್ನು ಸೃಷ್ಟಿಸಿ, ಬಸ್ ನಿಲ್ದಾಣ, ರೈಲು ನಿಲ್ದಾಣ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ತಿರುಗಾಡುವ ಈ ಗುಂಪು ಯೋಧರ ಕುಟುಂಬಕ್ಕೆ ಹಣ ತಲುಪಿಸುವುದಾಗಿ ಸುಳ್ಳು ಹೇಳಿ ಹಣ ಪೀಕುಲು ಆರಂಭಿಸಿದ್ದಾರೆ.

ಇನ್ನು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಮಂಡ್ಯದ ವೀರ ಯೋಧ ಗುರು ಅವರ ಆ್ಯಕ್ಸಿಸ್ ಬ್ಯಾಂಕ್ ಅಕೌಂಟ್‌ಗೆ ಹಣ ತಲುಪಿಸಿ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅಸಲಿಗೆ ಗುರು ಅವರ ಬಳಿಯಾಗಲಿ ಅವರ ಕುಟುಂಬದ ಬಳಿಯಾಗಲಿ ಆ್ಯಕ್ಸಿಸ್ ಬ್ಯಾಂಕ್ ಅಕೌಂಟ್ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಹಾಗಂತ ಸಾರ್ವನಿಕ ಸ್ಥಳಗಳಲ್ಲಿ ಹಣ ಕೇಳುತ್ತಿರುವ ಎಲ್ಲರೂ ಖದೀಮರು ಎಂದು ಹೇಳಲು ಸಾಧ್ಯವಿಲ್ಲ. ಯಾರು ನಿಜವಾಗಿಯೂ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ? ಯಾರು ಇದನ್ನೇ ದಂಧೆಯನ್ನಾಗಿ ಮಾಡಿಕೊಂಡಿದ್ದಾರೆ? ಎಂಬುದನ್ನು ಗುರುತಿಸುವ ಜವಾಬ್ದಾರಿ ಜನತೆ ಮೇಲಿದೆ.

ಹೇಗೆ ಸಹಾಯ ಮಾಡಬೇಕು?:

ಇದೆಲ್ಲಕ್ಕೂ ಹೊರತಾಗಿ ಹುತಾತ್ಮ ಯೋಧರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಬಯಸುವವರಿಗೆ ದಾರಿಯೊಂದಿದೆ. ಅದು ಸರ್ಕಾರದ ಅಧಿಕೃತ bharatkeveer.gov.in ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಹುತಾತ್ಮರ ಕುಟುಂಬಕ್ಕೆ ನೆರವು ನೀಡಬಹುದಾಗಿದೆ.

ವೆಬ್‌ಸೈಟ್‌ಗೆ ಭೇಟಿ ನೀಡಿದರೆ ಅಲ್ಲಿ ಹುತಾತ್ಮರಾದ ಪ್ರತಿ ಸೈನಿಕನ ಕುರಿತು ಮಾಹಿತಿ ಇರುತ್ತದೆ. ನೆರವು ನೀಡಬಯಸುವ ವ್ಯಕ್ತಿ ನಿರ್ದಿಷ್ಟ ಹುತಾತ್ಮ ಸೈನಿಕನಿಗೆ ಅಥವಾ ಸಾಮೂಹಿಕವಾಗಿ ಆರ್ಥಿಕ ಸಹಾಯ ನೀಡಬಹುದಾಗಿದೆ.

Know how to donate brave hearts through government website

ಓರ್ವ ವ್ಯಕ್ತಿ ಕನಿಷ್ಠ 10 ರೂ.ದಿಂದ ಗರಿಷ್ಠ 15 ಲಕ್ಷ ರೂ.ವರೆಗೂ  ಸಹಾಯ ನೀಡಬಹುದಾಗಿದ್ದು, ನಿಮ್ಮ ಹಣ ತಲುಪುತ್ತಿದ್ದಂತೇ  ವೆಬ್‌ಸೈಟ್‌ನಲ್ಲೇ ಪ್ರಮಾಣಪತ್ರವೊಂದು ಜನರೇಟ್ ಆಗುತ್ತದೆ. ಅಲ್ಲದೇ ವೆಬ್‌ಸೈಟ್‌ನಿಂದ ನಿಮಗೆ ಅಧಿಕೃತ ಇ-ಮೇಲ್ ಸಂದೇಶ ಕೂಡ ಬರುತ್ತದೆ.

ಸದ್ಯ ಈ ವೆಬ್‌ಸೈಟ್‌ನಲ್ಲಿ ಪುಲ್ವಾಮಾ ಹುತಾತ್ಮರ ಮಾಹಿತಿ ಅಪ್‌ಡೇಟ್ ಮಾಡಿಲ್ಲವಾದರೂ, ಶೀಘ್ರದಲ್ಲೇ 40 ಹುತಾತ್ಮರ ಮಾಹಿತಿ ಸಿಗಲಿದೆ.

Follow Us:
Download App:
  • android
  • ios