ರಾಜ್ಯದ ರೈತರು ಎರಡು ಪ್ರಮುಖ ಮೂಲಗಳಿಂದ ಸಾಲ ಮಾಡಿದ್ದಾರೆ. ಸಹಕಾರ ಬ್ಯಾಂಕ್'ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್'ಗಳಲ್ಲಿ ರೈತರು ಪಡೆದುಕೊಂಡಿದ್ದಾರೆ. 33 ಲಕ್ಷ ರೈತರು ರಾಷ್ಟ್ರೀಕೃತ ಬ್ಯಾಂಕ್'ಗಳಲ್ಲಿ ಸಾಲ ಮಾಡಿದ್ದಾರೆ. ಇದರ ಪ್ರಮಾಣ 42 ಸಾವಿರ ಕೋಟಿ ರೂ ಇದೆ. ಇನ್ನು, ಸಹಕಾರಿ ಸಂಸ್ಥೆಗಳಲ್ಲಿ 23 ಲಕ್ಷ ರೈತರು ಸಾಲ ಮಾಡಿದ್ದಾರೆ.

ಬೆಂಗಳೂರು(ಜೂನ್ 21): ಸಿದ್ದರಾಮಯ್ಯ ಸರಕಾರ 50 ಸಾವಿರ ರೂ.ಗಳ ಸಾಲಗಳನ್ನು ಮನ್ನಾ ಮಾಡುವುದಾಗಿ ಹೇಳಿದೆ. ಆದರೆ, ವಿಪಕ್ಷಗಳು ಇದು ಅಳುವ ಮಗುವಿಗೆ ಚಾಕೊಲೇಟ್ ಕೊಟ್ಟಂತಾಗಿದೆ ಎಂದು ಟೀಕಿಸಿವೆ. ಬೃಹತ್ ಪ್ರಮಾಣದಲ್ಲಿ ಸಾಲ ಮಾಡಿಕೊಂಡ ರೈತರಿಗೆ ಇದು ಅರೆಕಾಸಿಗ ಮಜ್ಜಿಗೆಯಂತಾಗಿದೆ. ರೈತರ ಎಲ್ಲಾ ಸಾಲವನ್ನೂ ಪೂರ್ಣವಾಗಿ ಮನ್ನಾ ಮಾಡಬೇಕಿತ್ತು ಎಂಬುದು ವಿಪಕ್ಷಗಳ ಆಗ್ರಹ. ಹಾಗಾದರೆ, ರಾಜ್ಯದಲ್ಲಿ ರೈತರ ಒಟ್ಟು ಸಾಲದ ಮೊತ್ತ ಎಷ್ಟು?

ರಾಜ್ಯದ ರೈತರು ಎರಡು ಪ್ರಮುಖ ಮೂಲಗಳಿಂದ ಸಾಲ ಮಾಡಿದ್ದಾರೆ. ಸಹಕಾರ ಬ್ಯಾಂಕ್'ಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕ್'ಗಳಲ್ಲಿ ರೈತರು ಪಡೆದುಕೊಂಡಿದ್ದಾರೆ. 33 ಲಕ್ಷ ರೈತರು ರಾಷ್ಟ್ರೀಕೃತ ಬ್ಯಾಂಕ್'ಗಳಲ್ಲಿ ಸಾಲ ಮಾಡಿದ್ದಾರೆ. ಇದರ ಪ್ರಮಾಣ 42 ಸಾವಿರ ಕೋಟಿ ರೂ ಇದೆ. ಇನ್ನು, ಸಹಕಾರಿ ಸಂಸ್ಥೆಗಳಲ್ಲಿ 23 ಲಕ್ಷ ರೈತರು ಸಾಲ ಮಾಡಿದ್ದಾರೆ. ಈ ಸಾಲದ ಪ್ರಮಾಣ 10 ಸಾವಿರ ಕೋಟಿ ರೂ ಇದೆ. ಸಹಕಾರಿ ಸಂಸ್ಥೆಗಳಲ್ಲಿ ರೈತರು ಮಾಡಿರುವ ಸಾಲದಲ್ಲಿ ಸರಕಾರ 8,165 ಕೋಟಿ ರೂ ಮನ್ನಾ ಮಾಡಿದೆ.

ರೈತರ ಸಾಲದ ಪ್ರಮಾಣ:
ರಾಷ್ಟ್ರೀಕೃತ ಬ್ಯಾಂಕ್'ಗಳಲ್ಲಿ:
ಸಾಲ ಪಡೆದ ರೈತರ ಸಂಖ್ಯೆ: 33 ಲಕ್ಷ
ಸಾಲದ ಪ್ರಮಾಣ: 42 ಸಾವಿರ ಕೋಟಿ ರೂ.

ಸಹಕಾರ ಸಂಸ್ಥೆಗಳಲ್ಲಿ:
ಸಾಲ ಪಡೆದ ರೈತರ ಸಂಖ್ಯೆ: 23 ಲಕ್ಷ
ಸಾಲದ ಪ್ರಮಾಣ: 10 ಸಾವಿರ ಕೋಟಿ ರೂ.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಬೇಕು ಎಂದು ಈ ವೇಳೆ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಆದರೆ, ನಿನ್ನೆಯಷ್ಟೇ ವಿತ್ತ ಸಚಿವ ಅರುಣ್ ಜೇಟ್ಲಿಯವರು ಕೇಂದ್ರ ಸರಕಾರದಿಂದ ಸಾಲ ಮನ್ನಾ ಮಾಡುವ ನಿರ್ಧಾರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದ ರೈತರು ಸಾಲ ಮಾಡಿರುವುದರಿಂದ, ಬಹಳಷ್ಟು ರೈತರಿಗೆ ಇನ್ನೂ ಕೂಡ ಖುಷಿಯ ಸುದ್ದಿ ಸಿಕ್ಕಿಲ್ಲ.