ಲೋಕಾಯುಕ್ತರನ್ನು ಕೊಲೆ ಮಾಡಲೆತ್ನಿಸಿದವನ ಹಿನ್ನಲೆ ಏನು?

First Published 7, Mar 2018, 4:10 PM IST
Know About The Man Who Stabbed Lokayukta
Highlights

ಕೊಲೆ ಯತ್ನ ನಡೆಸಿದವನು, ರಾಜಸ್ಥಾನ ಮೂಲದ ತೇಜ್ ರಾಜ್ ಶರ್ಮಾ ಎಂದು ಗುರುತಿಸಲಾಗಿದ್ದು, ಹಾಲಿ ತುಮಕೂರಿನ ತಿಪಟೂರಿನ ನಿವಾಸಿ ಆಗಿದ್ದಾನೆ.

ಬೆಂಗಳೂರು(ಮಾ.07): ನ್ಯಾ. ವಿಶ್ವನಾಥ್ ಶೆಟ್ಟಿ ಮೇಲೆ ಲೋಕಾಯುಕ್ತ ಕಚೇರಿಯಲ್ಲೇ ಕೊಲೆಯತ್ನ ನಡೆದಿದ್ದು, ಇದೀಗ ಲೋಕಾಯುಕ್ತರು ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆ ಯತ್ನ ನಡೆಸಿದವನು, ರಾಜಸ್ಥಾನ ಮೂಲದ ತೇಜ್ ರಾಜ್ ಶರ್ಮಾ ಎಂದು ಗುರುತಿಸಲಾಗಿದ್ದು, ಹಾಲಿ ತುಮಕೂರಿನ ತಿಪಟೂರಿನ ನಿವಾಸಿ ಆಗಿದ್ದಾನೆ.

ಯಾರು ಈ ತೇಜ್ ರಾಜ್ ಶರ್ಮಾ:

ತುಮಕೂರಿನಲ್ಲಿ ಈತ ಫರ್ನಿಚರ್ ವ್ಯಾಪಾರಿಯಾಗಿದ್ದು, ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ದೂರು ನೀಡುವ ಪ್ರೌವೃತ್ತಿ ಹೊಂದಿದ್ದ. ತೇಜಸ್ ಟೆಂಡರ್ ವಿಚಾರವಾಗಿ 18 ಸರ್ಕಾರಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಆದರೆ ತೇಜಸ್ ಪರವಾಗಿ ಲೋಕಾಯುಕ್ತದಲ್ಲಿ ತೀರ್ಪು ಬಂದಿರಲಿಲ್ಲ. ಇದರಿಂದ ಹತಾಶಗೊಂಡು ಲೋಕಾಯುಕ್ತ ವಿಶ್ವನಾಥ್ ಶೆಟ್ಟಿಯನ್ನು ಹತ್ಯೆ ಮಾಡಲು ಯತ್ನಿಸಿದ್ದಾನೆ.

ತೇಜಸ್ ಎಆರ್ಇ ಲಕ್ಷ್ಮಿ ಅವರನ್ನು ಬೇಟಿಯಾಗಲು ಲೋಕಾಯುಕ್ತ ಕಚೇರಿಗೆ ಬಂದಿದ್ದರು. ಅವರ ಉತ್ತರದಿಂದ ಸಮಾಧಾನಗೊಳ್ಳದೇ, ನನಗೆ ಅನ್ಯಾಯವಾಗಿದೆ ಎಂದು ಲೋಕಾಯುಕ್ತರನ್ನು ಚಾಕುವಿನಿಂದ ಮೂರು ಬಾರಿ ಇರಿದಿದ್ದಾನೆ.  

loader