DySP ಗಣಪತಿ ನಿಗೂಢ ಸಾವು ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳ FIR ನಲ್ಲಿ ಜಾರ್ಜ್ ಹೆಸರು ಲ್ಲೇಖವಾಗಿರುವ ವಿಚಾರ ರಾಷ್ಟ್ರೀಯ ಮಾಧ್ಯಮಗಳಲ್ಲ ಸದ್ದು ಮಾಡಿದೆ. ಈ ಸುದ್ದಿಯ ಬೆನ್ನಲ್ಲೇ ಸಿಎಂ ಕರೆದಿರುವ ಸಭೆಯಿಂದ ಕೆ. ಜೆ ಜಾರ್ಜ್ ದೂರವುಳಿದಿರುವ ವಿಚಾರ ಬೆಳಕಿಗೆ ಬಂದಿದೆ.
ಬೆಂಗಳೂರು(ಅ.27): DySP ಗಣಪತಿ ನಿಗೂಢ ಸಾವು ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳ FIR ನಲ್ಲಿ ಜಾರ್ಜ್ ಹೆಸರು ಲ್ಲೇಖವಾಗಿರುವ ವಿಚಾರ ರಾಷ್ಟ್ರೀಯ ಮಾಧ್ಯಮಗಳಲ್ಲ ಸದ್ದು ಮಾಡಿದೆ. ಈ ಸುದ್ದಿಯ ಬೆನ್ನಲ್ಲೇ ಸಿಎಂ ಕರೆದಿರುವ ಸಭೆಯಿಂದ ಕೆ. ಜೆ ಜಾರ್ಜ್ ದೂರವುಳಿದಿರುವ ವಿಚಾರ ಬೆಳಕಿಗೆ ಬಂದಿದೆ.
ಸಿಎಂ ಸಭೆಯಿಂದ ದೂರವುಳಿದಿರುವ ಸಚಿವ ಕೆ. ಜೆ ಜಾರ್ಜ್ ಹಿರಿಯ ವಕೀಲರ ಜತೆ ಚರ್ಚೆ ನಡೆಸುತ್ತಿದ್ದ, ನಿರೀಕ್ಷಣಾ ಜಾಮೀನು ಪಡೆಯುವುದು ಸೇರಿದಂತೆ ಮುಂದಿನ ಕಾನೂನು ಹೋರಾಟದ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಾನೂನು ತಜ್ಞರೊಂದಿಗಿನ ಮಾತುಕತೆ ಮುಗಿದ ಬಳಿಕವಷ್ಟೇ ಸಿಎಂ ಕರೆದಿರುವ ಸಚಿವರ ಸಭೆಗೆ ಕೆ.ಜೆ. ಜಾರ್ಜ್ ಆಗಮಿಸಲಿದ್ದು, ದೂರವಾಣಿ ಮೂಲಕ ಸಿಎಂ ಜತೆ ಈ ಕುರಿತಾಗಿ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ.
