ಈಗಾಗಲೇ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸತ್ಯರಾಜ್ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದು, ಬಾಹುಬಲಿ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದೆಂಬ ಪಟ್ಟು ಹಿಡಿದಿದ್ದಾರೆ. ಕನ್ನಡಿಗರ ಈ ಆಕ್ರೋಶ ಕಂಡು ಕಂಗಾಲಾಗಿರುವ ಸಿನಿಮಾ ನಿರ್ದೇಶಕ ರಾಜಮೌಳಿ ಕನ್ನಡದಲ್ಲೇ ಮಾತನಾಡಿರುವ ವಿಡಿಯೋವೊಂದು ಶೇರ್ ಮಾಡಿ ಕನ್ನಡಿಗರನ್ನು ಓಲೈಸಲು ಯತ್ನಿಸಿದ್ದಾರೆ. ಇದೀಗ ಇವರ ಮಾತಿಗೆ ಕಿರಿಕ್ ಕೀರ್ತಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ

ಬೆಂಗಳೂರು(ಎ.20): ಈಗಾಗಲೇ ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಸತ್ಯರಾಜ್ ವಿರುದ್ಧ ಕನ್ನಡಿಗರು ಸಿಡಿದೆದ್ದಿದ್ದು, ಬಾಹುಬಲಿ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಬಾರದೆಂಬ ಪಟ್ಟು ಹಿಡಿದಿದ್ದಾರೆ. ಕನ್ನಡಿಗರ ಈ ಆಕ್ರೋಶ ಕಂಡು ಕಂಗಾಲಾಗಿರುವ ಸಿನಿಮಾ ನಿರ್ದೇಶಕ ರಾಜಮೌಳಿ ಕನ್ನಡದಲ್ಲೇ ಮಾತನಾಡಿರುವ ವಿಡಿಯೋವೊಂದು ಶೇರ್ ಮಾಡಿ ಕನ್ನಡಿಗರನ್ನು ಓಲೈಸಲು ಯತ್ನಿಸಿದ್ದಾರೆ. ಇದೀಗ ಇವರ ಮಾತಿಗೆ ಕಿರಿಕ್ ಕೀರ್ತಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮ ವಿಡಿಯೋದಲ್ಲಿ ಸತ್ಯರಾಜ್ ಆಡಿದ ಮಾತುಗಳು ಕನ್ನಡಿಗರಿಗೆ ನೋವು ನೀಡಿದೆ. ಆದರೆ ಅವರ ಹೇಳಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅದೇನಿದ್ದರೂ ಅತ್ಯರಾಜ್ ಅವರ ವ್ಯಕ್ತಿಗತ ಅಭಿಪ್ರಾಯ. ನಾನು ಹೀಗಾಗಿ ಸತ್ಯರಾಜ್ ಮೇಲಿನ ಕೋಪವನ್ನು ಬಾಹುಬಲಿ ಸಿನಿಮಾದ ಮೇಲೆ ತೋರಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದರು.

ಇದನ್ನೂ ಓದಿ:

ಇವರ ಈ ಮಾತುಗಳನ್ನು ಆಲಿಸಿ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸದ್ಯ ನಿರ್ದೇಶಕ ರಾಜಮೌಳಿ ವಿಡಿಯೋ ಕುರಿತಾಗಿ ಕನ್ನಡ ಪರ ಹೋರಾಟಗಾರ, ಬಿಗ್ ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ತಮ್ಮ ಫೇಸ್'ಬುಕ್'ನಲ್ಲಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಇವರು ತಮ್ಮ ಫೇಸ್'ಬುಕ್'ನಲ್ಲಿ

ನೀವು ನಮಗೆ ಹೇಳೋದನ್ನೇ ಆ ಸತ್ಯರಾಜ್ ಅವರಿಗೂ ಹೇಳ್ಬೋದಲ್ವಾ ... ನೀವು ಹೇಗೆ ಒಂದು ತಿಂಗಳ ಹಿಂದೆ ವೀಡಿಯೋ ನೋಡಿದ್ರೋ, ಹಾಗೇ ನಾವೂ ಸಹ ಕೆಲವೇ ತಿಂಗಳ ಹಿಂದೆ ವೀಡಿಯೋ ನೋಡಿದ್ದು... ಹಾಗಾಗಿಯೇ ಈಗ ಕ್ಷಮೆ ಕೇಳಿ ಅಂತ ಹೇಳ್ತಿರೋದು.. ತನ್ನೊಬ್ಬನಿಂದ ಇಡೀ ಸಿನಿಮಾಗೆ ಸಮಸ್ಯೆ ಆಗುತ್ತೆ ಅನ್ನೋ ಮನೋಭಾವ ಆ ಮನುಷ್ಯನಿಗ್ಯಾಕಿಲ್ಲ..? ಇಷ್ಟು ಜನ ಕನ್ನಡಿಗರಿಗಿಂತ ಒಬ್ಬ ಸತ್ಯರಾಜ್ ದೊಡ್ಡವರಾ..? ನಮಗೂ ನಿಮ್ಮ ಸಿನಿಮಾ ಮೇಲೆ ಯಾವ ಕೋಪವೂ ಇಲ್ಲ, ನಮಗೆ ಈ ಸಮಯದಲ್ಲಿ ಆ ಮನುಷ್ಯನಿಂದ ಕ್ಷಮೆ ಕೇಳಿಸಬೇಕು ಅಷ್ಟೆ...! ಆರೂವರೆ ಕೋಟಿ ಕನ್ನಡಿಗರನ್ನು ತೊಂದರೆ ಕೊಡಬೇಡಿ ಅಂತ ಕೇಳೋ ಬದಲು, ಅವರೊಬ್ಬರಿಗೆ ಕ್ಷಮೆ ಕೇಳಲು ಹೇಳಿ... ಸಮಸ್ಯೆ ಪರಿಹಾರ....