ನವದೆಹಲಿ (ಅ.17): ಕಳೆದ ವರ್ಷ ಪಾಕ್ ಪ್ರವಾಸ ಕೈಗೊಂಡಿದ್ದಕ್ಕಾಗಿ ನಿರ್ಮಾಪಕ ಅನುರಾಗ್ ಕಶ್ಯಪ್ ಪ್ರಧಾನಿ ಮೋದಿಯವರ ಬಳಿ ಕ್ಷಮೆ ಕೋರಿದ ಬಳಿಕ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರನ್ ರಿಜಿಜು, ಸುದ್ಧಿಗಾಗಿ ಯಾರು ಬೇಕಾದರೂ ಪ್ರಧಾನಿಯವರನ್ನು ಪ್ರಶ್ನಿಸುವ ಧೋರಣೆ ಬೆಳೆದಿದೆ ಎಂದಿದ್ದಾರೆ.

ಭಾರತದಲ್ಲಿ ಇದೀಗ ಹೊಸ ಫ್ಯಾಶನ್ ಹುಟ್ಟಿಕೊಂಡಿದೆ. ಅವ ವಿದ್ಯಾರ್ಥಿಯೇ ಇರಬಹುದು ಅಥವಾ ಸಿನೆಮಾ ವ್ಯಕ್ತಿಯೇ ಇರಬಹುದು. ಪ್ರಧಾನಿ ವಿರುದ್ಧ ಮಾತನಾಡುವುದು ಅಥವಾ ಕೇವಲ ಸುದ್ಧಿಗಾಗಿ ಯಾವುದೇ ಲಾಜಿಕ್ ಇಲ್ಲದೇ ಪ್ರಧಾನಿಯವರನ್ನು ಪ್ರಶ್ನಿಸುವುದು ಚಟವಾಗಿಬಿಟ್ಟಿದೆ ಎಂದು ರಿಜಿಜು ಹೇಳಿದ್ದಾರೆ.

ಅನುರಾಗ್ ಕಶ್ಯಪ್ ಟ್ವಿಟರ್ ನಲ್ಲಿ ಕರಣ್ ಜೋಹರ್ ಗೆ ಬೆಂಬಲ ನೀಡುವುದಾಗಿ ಹೇಳಿಕೊಂಡಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ.