ಮನೆಯ ಬಳಿಯಲ್ಲಿಯೇ ಅತ್ಯಧಿಕ ಸಂಖ್ಯೆಯಲ್ಲಿ  ಕಾಳಿಂಗ ಸರ್ಪದ ಮೊಟ್ಟೆಗಳು ಪತ್ತೆಯಾಗಿವೆ. 

ಶಿವಮೊಗ್ಗ:  ಮಲೆನಾಡು ಹಾವುಗಳ ಆವಾಸ ಸ್ಥಾನವಾಗಿದ್ದು, ಇದೀಗ ಇಲ್ಲಿ ಹೆಚ್ಚಿನ ಸಂಖ್ಯೆ ಕಾಳಿಂ ಸರ್ಪದ ಮೊಟ್ಟೆಗಳು ಪತ್ತೆಯಾಗಿವೆ. 

ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು ಗ್ರಾಮದ ಮನೆಯೊಂದರ ಬಳಿ ಕಾಳಿಂಗ ಸರ್ಪದ 27 ಮೊಟ್ಟೆಗಳು ಪತ್ತೆಯಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಜತನದಿಂದ ಕಾದು ಮರಿಯಾದ ಬಳಿಕ ಕಾಡಿಗೆ ಬಿಟ್ಟಿದ್ದಾರೆ. 

27 ಮೊಟ್ಟೆಗಳಲ್ಲಿ 2 ಮೊಟ್ಟೆಗಳು ಒಡೆದು ಮರಿಗಳು ಹೊರಬಂದಿವೆ. ಉಳಿದ ನಾಲ್ಕು ಮೊಟ್ಟೆಗಳು ಮರಿಯಾಗುವಲ್ಲಿ ವಿಫಲವಾಗಿವೆ.