ಸದಾ ಪರಮಾಣು ಬಗೆಗೆ ಯೋಚಿಸುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಇದೀಗ ಮತ್ತೊಂದು ಬಾಂಬ್ ಹಾಕಿದ್ದಾರೆ.
ಪಯೋಂಗ್ಯಾಂಗ್(ಜ.1): ಸದಾ ಪರಮಾಣು ಬಗೆಗೆ ಯೋಚಿಸುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಇದೀಗ ಮತ್ತೊಂದು ಬಾಂಬ್ ಹಾಕಿದ್ದಾರೆ.
ನ್ಯೂಕ್ಲಿಯರ್ ನಿಯಂತ್ರಿಸುವ ಬಟನ್ ಯಾವಾಗಲೂ ಕೂಡ ನನ್ನ ಟೇಬಲ್ ಮೇಲೆಯೇ ಇರುತ್ತದೆ ಎಂದು ಹೇಳಿದ್ದು, ನಮ್ಮ ಬಳಿ ಸಂಪೂರ್ಣ ಅಮೆರಿಕವನ್ನು ತಲುಪುವ ಸಾಮರ್ಥ್ಯ ಪರಮಾಣುಗಳು ಇವೆ ಎಂದು ಹೇಳಿದ್ದಾರೆ.
ಆದ್ದರಿಂದ ಅಮೆರಿಕಾವು ನಮ್ಮನ್ನು ಕೆಣಕುವ ಮೊದಲು ಎಚ್ಚರಿಕೆ ವಹಿಸುವುದು ಸೂಕ್ತ ಎಂದು ಹೇಳಿದ್ದಾರೆ. ಇದು ಕೇವಲ ಬೆದರಿಕೆಯಲ್ಲ ವಾಸ್ತವ ಸಂಗತಿ ಎಂದು ಹೇಳಿದ್ದಾರೆ.
ಅಲ್ಲದೇ ಅವರು ಎಲ್ಲಿಯವರೆಗೆ ನಮ್ಮ ಮೇಲೆ ದಾಳಿಯ ಸಂಚು ರೂಪಿಸದೇ ಇರುತ್ತಾರೋ ಅಲ್ಲಿಯವರೆಗೂ ಯುದ್ಧ ನಡೆಯುವುದಿಲ್ಲ ಎಂದು ಹೊಸ ವರ್ಷದ ಆಚರಣೆ ವೇಳೆ ಈ ಮಾತುಗಳನ್ನು ಹೇಳಿದ್ದಾರೆ.
