"ರಾಜಕಾರಣಿಗಳು ಈ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಮಾವೋವಾದಿಗಳು ಮೊದಲು ಅವರನ್ನು ಕೊಲ್ಲಬೇಕು" ಎಂದು ಜನ್ ಅಧಿಕಾರ್ ಪಕ್ಷದ ಮುಖಂಡರಾಗಿರುವ ಪಪ್ಪು ಯಾದವ್ ಹೇಳಿದ್ದಾರೆ.

ಹಾಜಿಪುರ್: ಮಾಜಿ ಆರ್'ಜೆಡಿ ಮುಖಂಡ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಹೊಸ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭದ್ರತಾ ಪಡೆಗಳನ್ನು ಟಾರ್ಗೆಟ್ ಮಾಡುತ್ತಿರುವ ಮಾವೋವಾದಿಗಳಿಗೆ ಪಪ್ಪು ಹೊಸ ಸಲಹೆ ನೀಡಿದ್ದಾರೆ. ಭದ್ರತಾ ಪಡೆಗಳನ್ನು ಟಾರ್ಗೆಟ್ ಮಾಡುವ ಬದಲು ರಾಜಕೀಯ ನೇತಾರರನ್ನು ಕೊಲ್ಲಿ ಎಂದು ಪಪ್ಪು ಕರೆಕೊಟ್ಟಿದ್ದಾರೆ.

"ರಾಜಕಾರಣಿಗಳು ಈ ದೇಶವನ್ನು ಲೂಟಿ ಮಾಡುತ್ತಿದ್ದಾರೆ. ಮಾವೋವಾದಿಗಳು ಮೊದಲು ಅವರನ್ನು ಕೊಲ್ಲಬೇಕು" ಎಂದು ಜನ್ ಅಧಿಕಾರ್ ಪಕ್ಷದ ಮುಖಂಡರಾಗಿರುವ ಪಪ್ಪು ಯಾದವ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ಮಾವೋವಾದಿಗಳು ಛತ್ತೀಸ್'ಗಡದಲ್ಲಿ ಸಿಆರ್'ಪಿಎಫ್ ಪಡೆಯ ಮೇಲೆ ಭೀಕರ ದಾಳಿ ನಡೆಸಿ 25 ಜನರನ್ನು ಬಲಿತೆಗೆದಿದ್ದರು.