ಭಾರತದ ಪತ್ರಕರ್ತರ ಸಂರಕ್ಷಣಾ ಸಮಿತಿಯ ವರದಿಯ ಪ್ರಕಾರ 2010ರಿಂದ ಛತ್ತೀಸ್'ಘಡದಲ್ಲಿ ನಾಲ್ವರು ಪತ್ರಕರ್ತರನ್ನು ಕೊಲ್ಲಲಾಗಿದೆ.

ರಾಯ್'ಪುರ್(ಸೆ.27): 'ಜಾಗೃತರಾಗಿರಿ, ಮಾವೋವಾದಿಗಳ ಬಗ್ಗೆ ವರದಿ ಮಾಡುವವರು ನಿಮ್ಮ ಗಮನಕ್ಕೆ ಬಂದರೆ ಕೊಲ್ಲಿ ಅವರನ್ನು' ಎಂಬ 30 ಸೆಕೆಂಡಿನ ಆಡಿಯೋ ಕ್ಲಿಪ್ಅನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಬಿಜಾಪುರ ಜಿಲ್ಲೆಯ ಪ್ರೆಸ್ ಕ್ಲಬ್'ನಲ್ಲಿ ಈ ಆಡಿಯೋವನ್ನು ಬಿಡುಗಡೆ ಮಾಡಿದ ಪೊಲೀಸರು, ಮಾವೋವಾದಿ ಮುಖಂಡನೊಬ್ಬ ಕಾಡಿನಲ್ಲಿ ತಮ್ಮ ಅನುಯಾಯಿಗಳಿಗೆ ನೀಡಿರುವ ಆದೇಶ ಇದಾಗಿರುವ ಸಾಧ್ಯತೆಯಿದ್ದು,ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಈ ರೀತಿಯ ಮಾತುಗಳನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಐಜಿ ಮಟ್ಟದಲ್ಲಿ ತನಿಖೆ ಆರಂಭಿಸಲಾಗಿದೆ ಎಂದು ನಕ್ಸಲ್ ವಿರೋಧಿ ಕಾರ್ಯಾಚರಣೆಯ ವಿಶೇಷ ಮಹಾ ನಿರ್ದೇಶಕ ಡಿಎಂ ಅಶ್ವತಿ' ತಿಳಿಸಿದ್ದಾರೆ.

ಇನ್ನೊಂದು ಹಂತದಲ್ಲಿ ಭದ್ರತಾ ಪಡೆಗಳು ಪತ್ರಕರ್ತರಿಗೆ ಬೆದರಿಕೆಯೊಡ್ಡುತ್ತಿದ್ದರೆ, ಮಾವೋವಾದಿಗಳು ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾರೆಂದು ಪತ್ರಕರ್ತರನ್ನು ಕೊಲ್ಲುತ್ತಿದ್ದಾರೆ. ಇದರಿಂದ ಪತ್ರಕರ್ತರು ಅತಂತ್ರಸ್ಥಿತಿಯಲ್ಲಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

ಭಾರತದ ಪತ್ರಕರ್ತರ ಸಂರಕ್ಷಣಾ ಸಮಿತಿಯ ವರದಿಯ ಪ್ರಕಾರ 2010ರಿಂದ ಛತ್ತೀಸ್'ಘಡದಲ್ಲಿ ನಾಲ್ವರು ಪತ್ರಕರ್ತರನ್ನು ಕೊಲ್ಲಲಾಗಿದೆ.

(ಸಾಂದರ್ಭಿಕ ಚಿತ್ರ)