ವಕ್ಕರಿಸಿದ ಕಿಕಿ ಚಾಲೆಂಜ್: ಪೋಷಕರಿಗೆ ಪೊಲೀಸರ ಮೆಸೆಜ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 31, Jul 2018, 2:53 PM IST
Kiki Challenge: Jaipur Police Uses Dark Humour To Warn Against Viral Trend
Highlights

ಭಾರತಕ್ಕೂ ವಕ್ಕರಿಸಿದ ಕಿಕಿ ಚಾಲೆಂಜ್

ಮಕ್ಕಳ ರಕ್ಷಣೆಯೇ ಪೋಷಕರಿಗೆ ತಲೆನೋವು

ಮಕ್ಕಳ ಮೇಲೆ ನಿಗಾವಹಿಸಲು ಪೊಲೀಸರ ಸಲಹೆ

ದೆಹಲಿ, ಮುಂಬೈ, ಯುಪಿ, ಜೈಪುರ್ ಪೊಲೀಸರ ಮನವಿ
 

ಜೈಪುರ್(ಜು.31): ಇನ್ನೇನು ಬ್ಲೂವೇಲ್ ಚಾಲೆಂಜ್ ಎಂಬ ಭೂತ ಹೋಯ್ತು ಅನ್ನೋವಷ್ಟರಲ್ಲೇ ಕಿಕಿ ಚಾಲೆಂಜ್ ಎಂಬ ಹೊಸ ಭೂತ ನಮ್ಮ ಮಕ್ಕಳ ಪ್ರಾಣಕ್ಕೆ ಸಂಚಕಾರ ತಂದಿಟ್ಟಿದೆ.

ಗಾಯಕ ಡ್ರೇಕೆಯ ಇತ್ತೀಚಿನ ಹಿಟ್ "ಇನ್ ಮೈ ಫೀಲಿಂಗ್" ನಿಂದ ಸ್ಫೂರ್ತಿ ಪಡೆದಿರುವ ಕಿಕಿ ಚಾಲೆಂಜ್ ವಿಶ್ವದಾದ್ಯಂತ ಪೋಷಕರ ನಿದ್ದೆಗೆಡೆಸಿದೆ. ಇನ್ ಮೈ ಫೀಲಿಂಗ್ ಆಲ್ಬಂನಲ್ಲಿರುವಂತೆ ಯುವಕರು ಚಲಿಸುತ್ತಿರುವ ಕಾರಿನಿಂದ ಇಳಿದು ಡ್ಯಾನ್ಸ್ ಮಾಡುತ್ತಾ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.

ಕಿಕಿ ಚಾಲೆಂಜ್ ಭಾರತಕ್ಕೂ ಕಾಲಿಟ್ಟಿದ್ದು, ಯುವಕರನ್ನು ಈ ಅಪಾಯಕಾರಿ ಆಟದಿಂದ ದೂರ ಇಡಲು ಪೋಷಕರು ಮತ್ತು ಪೊಲೀಸರು ಹರಸಾಹಸಪಡುವಂತಾಗಿದೆ. ಇದೇ ಕಾರಣಕ್ಕೆ ದೆಹಲಿ, ಮುಂಬೈ, ಉತ್ತರಪ್ರದೇಶ ಪೊಲೀಸರು ಕಿಕಿ ಚಾಲೆಂಜ್ ನಿಂದ ನಿಮ್ಮ ಮಕ್ಕಳನ್ನು ರಕ್ಷಿಸಿ ಎಂದು ಪೋಷಕರಿಗೆ ಮನವಿ ಮಾಡಿದ್ದಾರೆ.

ಅದರಂತೆ ಜೈಪುರ್ ಪೊಲೀಸರೂ ಕೂಡ ಇದೇ ರೀತಿಯ ಮನವಿ ಮಾಡಿದ್ದು, ಕಿಕಿ ಆಟದಿಂದ ನಿಮ್ಮ ಮಕ್ಕಳನ್ನು ರಕ್ಷಿಸುವಂತೆ ಮನವಿ ಮಾಡಿದೆ. ಜೈಪುರ್ ಪೊಲೀಸರ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ಯುವಕನೋರ್ವನ ಫೋಟೋಗೆ ಹಾರ ಹಾಕಲಾಗಿದ್ದು, ಕಿಕಿಯ ಬಾಯ್ ಫ್ರೆಂಡ್ ಆಕೆಗಾಗಿ ಪ್ರಾಣ ತ್ಯಾಗ ಮಾಡಿದ್ದಾನೆ ಎಂದು ಅಡಿಬರಹ ಬರೆದಿದ್ದಾರೆ.

ಜೈಪುರ್ ಪೊಲೀಸರ ಈ ವಿನೂತನ ಪ್ರಯತ್ನಕ್ಕೆ ಭಾರೀ ಮೆಚ್ಚುಗೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜೈಪುರ್ ಪೊಲೀಸರ ಕುರಿತು ಹೊಗಳಿಕೆಯ ಮಾತುಗಳು ಕೇಳಿ ಬರುತ್ತಿವೆ.

loader