ಗರ್ಭಿಣಿ ಹೊಟ್ಟೆಗೆ ಒದ್ದ ಸಿಪಿಐಎಂ ಮುಖಂಡ : ಅನಿವಾರ್ಯವಾಯ್ತು ಗರ್ಭಪಾತ

First Published 15, Feb 2018, 1:42 PM IST
Kicked by local CPIM leader Kerala woman forced to undergo Abortion
Highlights

ಕೇರಳದಲ್ಲೊಂದು ಆಘಾತಕಾರಿ  ಘಟನೆ ನಡೆದಿದ್ದು, ಗರ್ಭಿಣಿಯ ಹೊಟ್ಟೆಯ ಮೇಲೆ ಸಿಪಿಐಎಂ ಮುಖಂಡ ಒದ್ದ ಪರಿಣಾಮವಾಗಿ ಆಕೆಗೆ ಅನಿವಾರ್ಯ ಗರ್ಭಪಾತವಾಗಿದೆ.

ಕೋಜಿಕೋಡ್ : ಕೇರಳದಲ್ಲೊಂದು ಆಘಾತಕಾರಿ  ಘಟನೆ ನಡೆದಿದ್ದು, ಗರ್ಭಿಣಿಯ ಹೊಟ್ಟೆಯ ಮೇಲೆ ಸಿಪಿಐಎಂ ಮುಖಂಡ ಒದ್ದ ಪರಿಣಾಮವಾಗಿ ಆಕೆಗೆ ಅನಿವಾರ್ಯ ಗರ್ಭಪಾತವಾಗಿದೆ.

ಇಲ್ಲಿನ ಕೋಜಿಕೋಡ್ ಜಿಲ್ಲೆಯಲ್ಲಿ  ಗಲಾಟೆ ನಡೆಯುತ್ತಿದ್ದ ಸಂದರ್ಭದಲ್ಲಿ ಗಲಾಟೆ ತಪ್ಪಿಸಲು ಬಂದ ನಾಲ್ಕು ತಿಂಗಳ ಗರ್ಭಿಣಿ ಹೊಟ್ಟೆಗೆ ಸಿಪಿಐಎಂ ಮುಖಂಡ ಒದ್ದಿದ್ದಾನೆ.  

ಇಬ್ಬರು ವ್ಯಕ್ತಿಗಳು ಹಾಗೂ ಆಕೆಯ ಗಂಡನ ನಡುವೆ ಗಲಾಟೆ ನಡೆಯುತ್ತಿದ್ದ ವೇಳೆ ಆಕೆ ಮಧ್ಯ ಪ್ರವೇಶಿಸಿದ್ದಾಳೆ.

ಆಗ ಆಕೆಗೆ ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅನಿವಾರ್ಯವಾಗಿ ಗರ್ಭಪಾತ ಮಾಡಲಾಗಿದೆ. ಈ ಸಂಬಂಧ ಮಹಿಳೆಯ ಪತಿ ದೂರು ದಾಖಲಿಸಿದ್ದಾರೆ.

 ಸದ್ಯ ಕಮ್ಯುನಿಸ್ಟ್ ಮುಖಂಡ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.

loader