Asianet Suvarna News Asianet Suvarna News

ಬಜೆಟ್ ಬಗ್ಗೆ ಕಿಚ್ಚ ಸುದೀಪ್ ರಿಯಾಕ್ಷನ್

ಬಜೆಟ್'ನಲ್ಲಿ ಪ್ರಕಟಿಸಿದ ವಿವಿಧ ಕ್ರಮಗಳಿಂದಾಗಿ ಕನ್ನಡ ಸಿನಿಮಾ ನಿರ್ಮಾಪಕರು ನಿಟ್ಟುಸಿರು ಬಿಡುವಂತಾಗಿದೆ ಎಂದೂ ಸುದೀಪ್ ಟ್ವೀಟ್ ಮಾಡಿದ್ದಾರೆ.

kiccha sudeep reaction on karnataka budget

ಬೆಂಗಳೂರು(ಮಾ. 15): ಸಿದ್ದರಾಮಯ್ಯನವರ ಬಜೆಟ್'ನಿಂದ ಕನ್ನಡ ಚಿತ್ರೋದ್ಯಮಕ್ಕೆ ಅನುಕೂಲವಾಗಿದೆ. ಸರಕಾರದಿಂದ ಚಿತ್ರೋದ್ಯಮಕ್ಕೆ ಇಂಥದ್ದೊಂದು ನೆರವಿನ ಅಗತ್ಯವಿತ್ತು ಎಂದು ಕಿಚ್ಚ ಸುದೀಪ್ ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಕಿಚ್ಚ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಶ್ರಮವನ್ನು ಶ್ಲಾಘಿಸಿದ್ದಾರೆ. ಬಜೆಟ್'ನಲ್ಲಿ ಪ್ರಕಟಿಸಿದ ವಿವಿಧ ಕ್ರಮಗಳಿಂದಾಗಿ ಕನ್ನಡ ಸಿನಿಮಾ ನಿರ್ಮಾಪಕರು ನಿಟ್ಟುಸಿರು ಬಿಡುವಂತಾಗಿದೆ ಎಂದೂ ಸುದೀಪ್ ಟ್ವೀಟ್ ಮಾಡಿದ್ದಾರೆ.

ಸುದೀಪ್ ಅಷ್ಟೇ ಅಲ್ಲದೆ, ಉಪೇಂದ್ರ, ಶಿವರಾಜಕುಮಾರ್, ಸಾರಾ ಗೋವಿಂದು ಮೊದಲಾದವರೆಲ್ಲರೂ ಚಿತ್ರರಂಗಕ್ಕೆ ಸಿದ್ದರಾಮಯ್ಯನವರ ಬಜೆಟ್ ಕೊಡುಗೆಯನ್ನು ಮೆಚ್ಚಿಕೊಂಡಿದ್ದಾರೆ.

ಮೈಸೂರಿನ ಹಿಮ್ಮಾವು ಎಂಬಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಇದಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್'ನಲ್ಲಿ ಹಣ ಮೀಸಲಿಟ್ಟಿದ್ದು, ಮುಂದಿನ 2 ವರ್ಷಗಳ ಅವಧಿಯಲ್ಲಿ ಚಿತ್ರನಗರಿ ತಲೆ ಎತ್ತಲಿದೆ ಎಂದು ಸಿಎಂ ತಮ್ಮ ಬಜೆಟ್'ನಲ್ಲಿ ತಿಳಿಸಿದ್ದಾರೆ. ಅಂತೆಯೇ  ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಗರಿಷ್ಠ ಟಿಕೆಟ್ ದರವನ್ನು 200ರುಗೆ ನಿಗದಿ ಪಡಿಸಲಾಗಿದೆ. ಅಷ್ಟೇ ಅಲ್ಲ, ಮಲ್ಟಿಪ್ಲೆಕ್ಸ್'ಗಳಲ್ಲಿ ಕನ್ನಡ ಚಿತ್ರಪ್ರದರ್ಶನ ಕಡ್ಡಾಯ ಅಂತಲೂ ಮುಖ್ಯಮಂತ್ರಿ ಸಿದ್ರಾಮಯ್ಯ ಹೇಳಿದ್ದಾರೆ.